ವರದಕ್ಷಿಣೆ ದಾಹಕ್ಕೆ ಬಲಿಯಾದರೆ ಯುವ ವ್ಯದ್ಯೆ ?
ತಿರುವನಂತಪುರಂ: ವರದಕ್ಷಿಣೆ ಕಾರಣಕ್ಕಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಆತ್ಮಹತ್ಯೆ ಪ್ರಕರಣ ಕೇರಳದಲ್ಲಿ ಸಂಚಲಸ ಸೃಷ್ಟಿಸಿದ್ದು, ಈ ಹಿನ್ನಲೆಯಲ್ಲಿ ಪ್ರಕರಣದ ಸಮಗ್ರ ತನಿಖೆಗೆ ಆರೋಗ್ಯ ಸಚಿವರು ಆದೇಶ ನೀಡಿದ್ದಾರೆ.
ತಿರುವನಂತಪುರಂ ವೆಂಜರಮೂಡ್ ಮೂಲದ ಡಾ. ಶಹನಾ (26) ಆತ್ಮಹತ್ಯೆ ಮಾಡಿಕೊಂಡ ವ್ಯದ್ಯೆ.
ಮೃತ ಯುವತಿ ಡಿ. ೪ ರಂದು ರಾತ್ರಿ ತನ್ನ ಕರ್ತವ್ಯಕ್ಕೆ ಹಾಜರಾಗಾದೆ ಮರುದಿನ ಬೆಳಗ್ಗೆ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆ ಮಾಡುವ ಮೊದಲು ಪ್ರತ ಬರೆದಿದ್ದು, ಅ ಪತ್ರದಲ್ಲಿ ಹಲವು ವಿಚಾರ ಉಲ್ಲೆಂಘವಾಗಿದ್ದು, ‘ಎಲ್ಲರಿಗೂ ಹಣ ಬೇಕು, ಎಲ್ಲಕ್ಕಿಂತ ಹಣವೇ ಶ್ರೇಷ್ಠ ‘ ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಘಟನೆ ವಿವರ:
ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಓದುತ್ತಿದ್ದ ಡಾ. ರುವೈಸ್ ಹಾಗೂ ಡಾ. ಶಹನಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಇವರಿಬ್ಬರ ಮನೆಯವರು ಮದುವೆಯ ವಿಚಾರವಾಗಿ ಮಾತುಕತೆ ನಡೆಸಿದ್ದರು. ವಿವಾಹ ಪ್ರಸ್ತಾಪದ ವೇಳೆ ಡಾ. ರುವೈಸ್ ಮನೆಯರು 150 ಪವನ್ ಚಿನ್ನ , ಬಿಎಂಡಬ್ಲ್ಯು ಕಾರು ಹಾಗೂ ಜಮೀನು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಯುವತಿ ಮನೆಯವರು 50 ಲಕ್ಷ ಹಣ , 50 ಪವನ್ ಚಿನ್ನ ಮತ್ತು ಕಾರು ನೀಡುವುದಾಗಿ ಹೇಳಿದ್ದು, ಆದರೆ ಇದಕ್ಕೆ ವರನ ಮನೆಯವರು ಒಪ್ಪಿಗೆ ನೀಡಿರಲಿಲ್ಲ.
ಈ ಹಂತದಲ್ಲಿ ಮದುವೆ ಮುರಿದು ಬಿದ್ದಿದ್ದು, ಇದರಿಂದ ಮನನೊಂದ ಶಹಾನಾ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಆರೋಪವನ್ನು ಡಾ. ರುವೈಸ್ ತಳ್ಳಿ ಹಾಕಿದ್ದಾರೆ.
ಈ ಪ್ರಕರಣದಲ್ಲಿ ವರದಕ್ಷಿಣೆಯ ನೇರ ಉಲ್ಲೇಖವಿಲ್ಲದ ಕಾರಣ, ಪೊಲೀಸರು ಆರಂಭದಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಈ ವಿಚಾರ ಕೇರಳದಲ್ಲಿ ತಲ್ಲಣ ಸೃಷ್ಟಿಸಿರುವಂತೆ ಈ ಬಗ್ಗೆ ಸಮಗ್ರ ತನಿಖೆಗೆ ಪೊಲೀಸರು ಆರೋಗ್ಯ ಸಚಿವರು ಆದೇಶ ಹೊರಡಿಸಿದ್ದಾರೆ. ಈ ನಡುವೆ ಕೇರಳ ಮಹಿಳಾ ಆಯೋಗವು ಶಹನ ತಾಯಿಯನ್ನು ಭೇಟಿಯಾಗಿದ್ದು, ಈ ವೇಳೆ ಮುರಿದ ಮದುವೆ ಪ್ರಸ್ತಾಪದಿಂದ ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮಗಳ ಆತ್ಮಹತ್ಯೆಗೆ ಡಾ. ರುವೈಸ್ ಹಾಗೂ ಅವರ ಕುಟುಂಬದವರ ಪಾತ್ರ ಇರುವುದಾಗಿ ದೂರಿಕೊಂಡಿದ್ದಾರೆ.