Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವರ್ಕೌಟ್‌ ವೇಳೆ ಜಿಮ್‌‌ನಲ್ಲಿ ಕುಸಿದು ಬಿದ್ದು ಯುವಕ ಮೃತ್ಯು

ಲಕ್ನೋ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರ್ಕೌಟ್‌ ವೇಳೆ ಜಿಮ್‌ನಲ್ಲಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಸರಸ್ವತಿ ವಿಹಾರ್ ಮೂಲದ ಸಿದ್ದಾರ್ಥ್‌(21) ಮೃತ ಯುವಕ. ಸಿದ್ದಾರ್ಥ್ ಶನಿವಾರ ಜಿಮ್ ಗೆ ತೆರಳಿದ್ದು,ಈ ವೇಳೆ ವರ್ಕೌಟ್ ಮಾಡುವ ಟ್ರೆಡ್ ಮಿಲ್ ಗೆ ಹತ್ತಿದ್ದಾರೆ. ಟ್ರೆಡ್ ಮಿಲ್ ನಲ್ಲಿ ಓಡುವ ವೇಳೆ ಸಿದ್ದಾರ್ಥ್ ಒಂದು ಕ್ಷಣಕ್ಕೆ ವೇಗವನ್ನು ಕಡಿಮೆ ಮಾಡಿ ನಿಂತುಕೊಂಡಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ.

ಇನ್ನು ಅವರನ್ನು ನೋಡಿದ ಜಿಮ್ ನಲ್ಲಿದ್ದ ಇಬ್ಬರು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಪ್ರಜ್ಞೆತಪ್ಪಿ ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಸಿದ್ದಾರ್ಥ್ ಅದಾಗಲೇ ಮೃತಪಟ್ಟಿದ್ದು, ಅವರಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಪರೀಕ್ಷಿಸಿ ಹೇಳಿದ್ದಾರೆ.