Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಹೀಗೆ ನೋಡಬಹುದು..

ವಾಟ್ಸಾಪ್ ನಲ್ಲಿ ಅನೇಕ ಬಗೆಯ ವಿಶೇಷ ಫೀಚರ್ಸ್ ಪರಿಚಯವಾಗುತ್ತಲೇ ಇರುತ್ತದೆ. ಇತ್ತೀಚೆಗಂತೂ ವಾಟ್ಸಾಪ್ ಚಾನೆಲ್ಸ್ ಒಳಗೊಂಡಂತೆ ಬೇರೆ ಬೇರೆ ರೀತಿಯ ವೈಶಿಷ್ಟ್ಯತೆಗಳನ್ನು ನಾವು ಕಂಡಿದ್ದೇವೆ. ಯಾವ ಆ್ಯಪ್ ಗಳು ಅದೆಷ್ಟೇ ಪರಿಣಾಮ ಬೀರಿದರೂ ವಾಟ್ಸಾಪ್ ಮಾತ್ರ ತನ್ನ ಗುಣಮಟ್ಟವನ್ನು ಇನ್ನೂ ಕಳೆದುಕೊಂಡಿಲ್ಲ. ಇದೀಗ ಇದರ ಮತ್ತೊಂದು ಟ್ರಿಕ್ಸ್ ಬಹಿರಂಗವಾಗಿದೆ. ವಾಟ್ಸ್​ಆ್ಯಪ್​ನಲ್ಲಿ ಯಾರಾದರು ನಿಮಗೆ ಮೆಸೇಜ್ ಮಾಡಿ, ಆ ಮೆಸೇಜ್ ಡಿಲೀಟ್ ಮಾಡಿದರೆ ಅದು ಏನು ಎಂಬುದನ್ನು ನೋಡಲು ಸಾಧ್ಯವಿಲ್ಲ.

ಇದೀಗ ಅನೇಕ ಥರ್ಡ್ ಪಾರ್ಟಿ ಆ್ಯಪ್ಗಳು ಹುಟ್ಟಿಕೊಂಡಿವೆ. ಅದು ಡಿಲೀಟ್ ಆದ ಮೆಸೇಜುಗಳನ್ನು ನೋಡುವುದರಿಂದ ಹಿಡಿದು ನಮ್ಮ ಡಿಪಿ ಯಾರೆಲ್ಲ ವೀಕ್ಷಿಸಿದ್ದಾರೆ ಎಂಬುದರ ವರೆಗೆ ಎನ್ನಬಹುದು. ನಮ್ಮ ಸ್ನೇಹಿತರು ನಮಗೆ ತಪ್ಪಿ ಏನನ್ನಾದರೂ ಮೆಸೇಜ್ ಮಾಡಿದರೆ ಅದನ್ನು ಡಿಲೀಟ್ ಮಾಡುವಂತಹ ಆಯ್ಕೆ ವಾಟ್ಸ್ಆ್ಯಪ್ನಲ್ಲಿ ನೀಡಲಾಗಿದೆ. ವಾಟ್ಸ್ಆ್ಯಪ್ನಲ್ಲಿ ಯಾರಾದರು ನಿಮಗೆ ಮೆಸೇಜ್ ಮಾಡಿ, ಆ ಮೆಸೇಜ್ ಡಿಲೀಟ್ ಮಾಡಿದರೆ ಅದು ಏನು ಎಂಬುದನ್ನು ನೋಡಲು ಸಾಧ್ಯವಿಲ್ಲ. ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ಗಳು ಹುಟ್ಟುಕೊಂಡಿವೆ.

 

ಡಿಲೀಟ್ ಆದ ಮೆಸೇಜ್ ನೋಡೋದು ಹೇಗೆ..?

 

ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ಆ್ಯಪ್​ಗಳ ಮೂಲಕ ವಾಟ್ಸ್​ಆ್ಯಪ್​ನಲ್ಲಿ ಡಿಲೀಟ್ ಆದ ಮೆಸೇಜ್​ಗಳನ್ನು ನೋಡಬಹುದಾಗಿದೆ. WAMR, WhatsDeleted, Deleted Whatsappmessage ಥರ್ಡ್ ಪಾರ್ಟಿ ಆ್ಯಪ್​​ಗಳ ಮೂಲಕ ಡಿಲಿಟ್ ಆದ ಮೆಸೇಜ್​ಗಳು ಏನು ಎಂಬುದನ್ನು ನೋಡಬಹುದು. ಗೂಗಲ್ ಪ್ಲೇ ಸ್ಟೋರ್ ನಿಂದ whatsapp Removed ಅಪ್ಲಿಕೇಶನನ್ನು ಡೌನ್ ಲೋಡ್ ಮಾಡಿ. ಅಪ್ಲಿಕೇಶನ್​ನ ಸೆಟ್ಟಿಂಗ್ಸ್ ಅನ್ನು ಪೂರ್ಣಗೊಳಿಸಿ ಅನುಮತಿ ನೀಡಿ.

ಬಳಿಕ ಯಾವ ಅಪ್ಲಿಕೇಶನ್ ನೋಟಿಫಿಕೇಶನ್ ಅನ್ನು ಸೇವ್ ಮಾಡಬೇಕೋ ಅದನ್ನು ಸೆಲೆಕ್ಟ್ ಮಾಡಿ. ಅಂದರೇ, ವಾಟ್ಸ್​ಆ್ಯಪ್​ ನೋಟಿಫಿಕೇಶನ್ ಸೇವ್ ಮಾಡಬೇಕು ಎಂದಿದ್ದರೇ, ವಾಟ್ಸ್​ಆ್ಯಪ್​ ಮೇಲೆ ಕ್ಲಿಕ್ ಮಾಡಿ. NEXT ಆಯ್ಕೆಯನ್ನು ಒತ್ತಿರಿ. ಇದಾದ ನಂತರ ಹೊಸ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಸೇವ್ ಒತ್ತಿರಿ. ಸೇವ್ ಫೈಲ್ ಗೆ ಅನುಮತಿಸಿ. ಇಷ್ಟಾದ ಮೇಲೆ ಅಪ್ಲಿಕೇಶನ್ ಬಳಸಲು ಯೋಗ್ಯವಾಗುತ್ತದೆ. ಹಾಗೆಯೇ ನಿಮ್ಮ ಡಿಲೀಟ್ ಆದ ಮೆಸೇಜ್ ಗಳು ಹಾಗೂ ಡಾಕ್ಯುಮೆಂಟ್ಸ್ ಗಳು ಸಿಗುತ್ತದೆ.

ಥರ್ಡ್ ಪಾರ್ಟಿ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ:

ಆದರೆ, ನೀವು ಥರ್ಡ್ ಪಾರ್ಟಿ ಆ್ಯಪ್ ಡೌನ್​ಲೋಡ್ ಮಾಡುವ ಮುನ್ನ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು. ಈ ಥರ್ಡ್ ಪಾರ್ಟಿ ಆ್ಯಪ್ ಅಷ್ಟೊಂದು ಸುರಕ್ಷಿತವಾಗಿದ್ದಲ್ಲ. ಯಾಕೆಂದರೆ ಇದು ನಿಮ್ಮ ಸ್ಮಾರ್ಟ್ಫೋನ್​ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಹೀಗಾಗಿ ಈ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್​ಗಳಿಂದ ಮಾತ್ರ ಇದನ್ನ ಡೌನ್ಲೋಡ್ ಮಾಡಿ. ಡೌನ್‌ಲೋಡ್ ಮಾಡಿ ನೋಡಿದರೆ ಮಾತ್ರ ಖಚಿತವಾಗಿ ಡಿಲೀಟ್ ಆದ ಮೆಸೇಜ್ ನ್ನು ನೀವು ಕೂಡಾ ವೀಕ್ಷಿಸಬಹುದಾಗಿದೆ.