Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಾಟ್ಸ್​​ಆ್ಯಪ್ ಪಿಂಕ್ ನಿಂದ ಎಚ್ಚರಿಕೆ : ವಾಟ್ಸ್​ಆ್ಯಪ್ ಪಿಂಕ್ ಅನ್ನು ಇನ್​ಸ್ಟಾಲ್ ಮಾಡದಂತೆ ಪೊಲೀಸರ ಮನವಿ

ಬೆಂಗಳೂರು: ಕರ್ನಾಟಕ ಪೊಲೀಸರು ಸೈಬರ್ ವಂಚನೆಯ ಇನ್ನೊಂದು ಮುಖವನ್ನು ಪತ್ತೆಹಚ್ಚಿದ್ದು ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್​​ಆ್ಯಪ್ ಅಥವಾ ವಾಟ್ಸ್​ಆ್ಯಪ್ ಪಿಂಕ್ ಅನ್ನು ಇನ್​ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಹೇಳಿದ್ದಾರೆ.
ಒಂದು ವೇಳೆ ನೀವು ವಾಟ್ಸ್​ಆ್ಯಪ್ ಪಿಂಕ್ ಇನ್​ಸ್ಟಾಲ್ ಮಾಡಿದ್ದೇ ಆದಲ್ಲಿ ಹ್ಯಾಕರ್​​ಗಳು ನಿಮ್ಮ ಫೋಟೊ, ಕಾಂಟ್ಯಕ್ಟ್​, ನೆಟ್​ ಬ್ಯಾಂಕಿಂಗ್ ಪಾಸ್ವರ್ಡ್​​ಗಳು, ಎಸ್​ಎಂಎಸ್​​ಗಳನ್ನು ಹ್ಯಾಕ್ ಮಾಡಲಿದ್ದಾರೆ ಎಂದು ಕರ್ನಾಟಕ ಪೊಲೀಸ್ ಎಚ್ಚರಿಕೆ ನೀಡಿದೆ.
ಒಂದು ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದರೆ 1930 ಗೆ ಕರೆ ಮಾಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ