Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಾಯುಪಡೆಗೆ ಸೇರಲಿದೆ 6 ಹೊಸ ಸ್ವದೇಶಿ ನೇತ್ರಾ-I ಕಣ್ಗಾವಲು ವಿಮಾನ

ನವದೆಹಲಿ: ಭಾರತೀಯ ವಾಯುಸೇನೆಯು 6 ಸ್ವದೇಶಿ ನೇತ್ರಾ-I ಕಣ್ಗಾವಲು ವಿಮಾನಗಳನ್ನು ಖರೀದಿಸಲು ಸಿದ್ಧವಾಗಿದೆ ಎಂದು ಸೇನೆ ಹೇಳಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ಎರಡು ನೇತ್ರಾ-I ವಿಮಾನಗಳನ್ನು ಈಗಾಗಲೇ ಭಾರತೀಯ ವಾಯುಪಡೆ ಹೊಂದಿದೆ.

ಇನ್ನು 6 ಹೊಸ ನೇತ್ರಾ-I ವಿಮಾನಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದ್ದು, ಯೋಜನೆ ಪ್ರಕಾರ ಈ ವಿಮಾನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಲಿದೆ. ಈ ಯೋಜನೆಗಾಗಿ ವಾಯುಪಡೆಗೆ 8,000 ಕೋಟಿ ರೂಪಾಯಿಗಳ ಯೋಜನೆ ಒದಗಿಸಲಾಗಿದೆ.