ವಿಜಯನಗರ ಜಿಲ್ಲೆಯ ನೂತನ ವಾರ್ತಾಧಿಕಾರಿಯಾಗಿ ಗವಿಸಿದ್ದಪ್ಪ ಹೊಸಮನಿ ಅಧಿಕಾರ ಸ್ವೀಕಾರ
ಹೊಸಪೇಟೆ: ವಿಜಯನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಗವಿಸಿದ್ದಪ್ಪ ಹೊಸಮನಿ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.
ಮೂಲತಃ ಕೊಪ್ಪಳ ಜಿಲ್ಲೆಯವರಾದ ಗವಿಸಿದ್ದಪ್ಪ ಅವರು ಈ ಮೊದಲು ಬೀದರ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಲೇಖಕರು ಆಗಿರುವ ಗವಿಸಿದ್ದಪ್ಪ ಅವರು ಕಥಾ ಸಂಕಲನ ಪ್ರಕಟಿಸಿದ್ದಾರೆ.
ಬಿ. ಧನಂಜಯಪ್ಪ ಅವರು ಈ ಮೊದಲು ವಿಜಯನಗರ ಜಿಲ್ಲೆಯ ವಾರ್ತಾಧಿಕಾರಿಯಾಗಿದ್ದರು.