ವಿಜಯಪುರ ಜಿಲ್ಲೆಯಲ್ಲಿ ವಿವಿಧಡೆ ಭೂಕಂಪನ ಅನುಭವ.!
ವಿಜಯಪುರ: “ವಿಜಯಪುರ ಜಿಲ್ಲೆಯಲ್ಲಿ ವಿವಿಧಡೆ ಭೂಕಂಪನ ಮುಂದುವರೆದಿದ್ದು, ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ ತಿಳಿದುಬಂದಿದೆ.
ಅಲ್ಲದೆ ವಿಜಯಪುರ ನಗರದಲ್ಲೂ ಎರಡು ಬಾರಿ ಭೂಮಿ ಕಂಪಿಸಿದೆಯಂತೆ. ಕಳೆದ ವರ್ಷ ಡಿಸೆಂಬರ್ 8 ರಂದು ವಿಜಯಪುರ ತಾಲೂಕಿನ ಉಕಿಮನಾಳ ಗ್ರಾಮದಲ್ಲಿ ಭೂಕಂಪವಾಗಿತ್ತು.ಜಿಲ್ಲೆಯ ಉಕಿಮನಾಳ ಗ್ರಾಮದಲ್ಲಿ 3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ದೃಢಪಡಿಸಿದ್ದರೂ. ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪ ಆಗುತ್ತಲೇ ಇರುವುದು ಜನರಲ್ಲಿ ಆತಂಕ ಮನೆಮಾಡಿದೆ.!