ವಿಟ್ಲ: ಡಿವೈಡರ್ ಜಂಪ್ ಮಾಡಿದ ಕಾರು- ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ..!
![](https://suddimane.com/wp-content/uploads/2023/07/WhatsApp-Image-2023-07-10-at-4.13.09-PM.jpeg)
ವಿಟ್ಲ: ಡಿವೈಡರ್ ಮೇಲಿನಿಂದ ಜಂಪ್ ಮಾಡಿದ ಕಾರು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕಿ ಗಾಯಗೊಂಡು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಸೂರಿಕುಮೇರು ಎಂಬಲ್ಲಿ ನಡೆದಿದೆ.
ಬಳ್ಳಾರಿ: ನಾಲ್ಕು ಲಕ್ಷ ವಿದ್ಯುತ್ ಬಿಲ್ ನೀಡಿ ಗ್ರಾಹಕನಿಗೆ ಶಾಕ್ ಕೊಟ್ಟ ಜೆಸ್ಕಾಂ
ರಮ್ಯಾ, ಗಾಯಗೊಂಡ ಮಹಿಳೆ. ಬಿಸಿರೋಡಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಮೇಲೆ ಹತ್ತಿ ಕೆಳಗೆ ರಸ್ತೆಗೆ ಇಳಿದು ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿಹೊಡೆದಿದೆ. ಸೂರಿಕುಮೇರು ಪೆಟ್ರೋಲಿಯಂ ಪಂಪ್ ಮುಂಭಾಗದಲ್ಲಿ ಘಟನೆ ನಡೆದಿದೆ. ರಮ್ಯಾ ಅವರು ಕಾರಿನಲ್ಲಿ ಒಬ್ಬರೇ ಇದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.