ವಿದೇಶದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ: 43 ಶಂಕಿತರ ಗುರುತಿಸಿದ ಎನ್ಐಎ
ನವದೆಹಲಿ:ಕಳೆದ ವರ್ಷದ ಆರಂಭದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಅಮೆರಿಕ, ಯುಕೆ ಮತ್ತು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಮೇಲೆ ನಡೆದ ದಾಳಿಯಲ್ಲಿ ಒಟ್ಟು 43 ಶಂಕಿತರು ಭಾಗಿಯಾಗಿದ್ದಾರೆ ಎಂದು ರಾಷ್ಟ್ರೀ ಯ ತನಿಖಾ ಸಂಸ್ಥೆ (ಎನ್ಐಎ) ಹೇಳಿದೆ. ವರದಿಗಳ ಪ್ರಕಾರ, ಕ್ರೌಡ್ ಸೋರ್ಸಿಂಗ್ ವಿಧಾನವನ್ನು ಬಳಸಿಕೊಂಡು ಎನ್ಐಎ ಈ ಎಲ್ಲಾ ಶಂಕಿತರನ್ನು ಗುರುತಿಸಿದೆ.
ಗೃಹ ಸಚಿವಾಲಯದ ಆದೇಶದ ನಂತರ ಈ ವರ್ಷದ ಜೂನ್ ನಲ್ಲಿ ಯುಎಸ್, ಯುಕೆ ಮತ್ತು ಕೆನಡಾದಲ್ಲಿ ಭಾರತೀಯರಾಜತಾಂತ್ರಿ ಕ ನಿಯೋಗಗಳ ಮೇಲಿನ ದಾಳಿಯ ಪ್ರ ಕರಣವನ್ನು ಎನ್ಐಎ ವಹಿಸಿಕೊಂಡಿದೆ. ವಿದೇಶದಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಇದುವರೆಗೆ 50 ದಾಳಿಗಳನ್ನು ನಡೆಸಲಾಗಿದ್ದು, ದಾಳಿಗಳಿಗೆ ಸಂಬಂಧಿಸಿದಂತೆ ಸುಮಾರು 80 ವ್ಯಕ್ತಿಗಳನ್ನುವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಗಳು ಸೂಚಿಸಿವೆ.
ಕಳೆದ ವರ್ಷ ಮಾರ್ಚ್ ಮತ್ತು ಜುಲೈನಲ್ಲಿ, ಭಾರತೀಯ ರಾಜತಾಂತ್ರಿ ಕ ನಿಯೋಗಗಳನ್ನು ಗುರಿಯಾಗಿಸಿಕೊಂಡು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಖಾಲಿಸ್ತಾನಿ ಘಟಕಗಳು ಪ್ರತಿಭಟನೆಯ ಸಮಯದಲ್ಲಿ ಎರಡು ಪ್ರತ್ಯೇಕ ದಾಳಿ ನಡೆಸಿತ್ತು. ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಮುಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗ್ರೆನೇಡ್ ಎಸೆಯಲಾಗಿತ್ತು.