ವಿದ್ಯಾರ್ಥಿಗಳಿಗೆ ಅಂಗೈಗೆ ಬಿಸಿ ಎಣ್ಣೆ ಸುರಿದು ಶಿಕ್ಷೆ- ಶಿಕ್ಷಕರ ಅಮಾನತು
ರಾಯಪುರ :ಶಾಲೆಯೊಂದರ 25 ಮಕ್ಕಳಿಗೆ ಬಲವಂತವಾಗಿ ಬಿಸಿ ಎಣ್ಣೆ ಸುರಿದು ಮಕ್ಕಳು ಪರಸ್ಪರರ ಅಂಗೈಗೆ ಬಿಸಿ ಎಣ್ಣೆಯಿಂದ ಸುಟ್ಟುಕೊಳ್ಳುವಂತೆ ಶಿಕ್ಷಿಸಿದ ಭಯಾನಕ ಘಟನೆ ಛತ್ತೀಸ್ ಗಢದ ಬಸ್ತರ್ ವಿಭಾಗದ ಕೊಂಡಗಾಂವ್ ಗ್ರಾಮದ ಸರ್ಕಾರಿ ಶಾಲೆ ವರದಿಯಾಗಿದೆ.
ವಿದ್ಯಾರ್ಥಿನಿಯೊಬ್ಬಳು ಶೌಚಾಲಯದ ಹೊರಗೆ ಮಲ ವಿಸರ್ಜನೆ ಮಾಡಿದಳು ಎಂದು ಈ ಶಿಕ್ಷೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಅಮಾನುಶ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆನ್ನಲೆ ಶಿಕ್ಷಣ ಇಲಾಖೆ ಘಟನೆ ಬಗ್ಗೆ ವಿಚಾರಣೆಗೆ ಆದೇಶ ನೀಡಿದೆ. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಸಂತ್ರಸ್ತ ಮಕ್ಕಳು 11-12 ವರ್ಷದವರು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ಊಟದ ವೇಳೆ, ಶಿಕ್ಷಕರು ಊಟಕ್ಕೆ ತೆರಳಿದ್ದರು. ಅವರು ಮರಳಿದಾಗ, ಯಾರೋ ವಿದ್ಯಾರ್ಥಿಗಳು ಶೌಚಾಲಯದ ಹೊರಗೆ ವಿಸರ್ಜಿಸಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ ಯಾರೂ ಒಪ್ಪಿಕೊಂಡಿಲ್ಲ.ಈ ಹಿನ್ನೆಲೆಯಲ್ಲಿ ಸಾಮೂಹಿಕ ಶಿಕ್ಷೆಗೆ ಶಿಕ್ಷಕರು ಮುಂದಾದರು. ಮಧ್ಯಾಹ್ನದ ಬಿಸಿಯೂಟದ ಅಡುಗೆಮನೆಯಿಂದ ಬಿಸಿ ಎಣ್ಣೆ ತಂದು, ಪರಸ್ಪರರ ಕೈಗೆ ಎಣ್ಣೆ ಸುರಿಯುವಂತೆ ಬಲವಂತಪಡಿಸಿದರು ಎಂದು ಎಂದು ಹೇಳಲಾಗಿದೆ.
ತಕ್ಷಣ ಶಾಲೆಗೆ ತನಿಖಾ ತಂಡ ಕಳುಹಿಸಲಾಗಿದೆ.ಎಂದು ತಾಲೂಕು ಶಿಕ್ಷಣ ಸಂಪನ್ಮೂಲ ಅಧಿಕಾರಿ ತಾಹಿರ್ ಖಾನ್ ಹೇಳಿದ್ದಾರೆ. ಐದು ಮಕ್ಕಳ ಅಂಗೈನಲ್ಲಿ ಸುಟ್ಟ ಗುಳ್ಳೆಗಳಿವೆ ಎಂದು ಮಧುಲಿಕಾ ತಿವಾರಿ ಸ್ಪಷ್ಟಪಡಿಸಿದ್ದಾರೆ.