Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿದ್ಯುತ್ ಅವಘಡದಲ್ಲಿ ತಾಯಿ-ಮಗು ಸಾವಿಗೆ ಇಲಿ ಕಾರಣ ಎಂದ ಸಚಿವ ಕೆ.ಜೆ ಜಾರ್ಜ್

ಬೆಂಗಳೂರು: ವಿದ್ಯುತ್ ಲೈನ್ ತುಳಿದು ತಾಯಿ-ಮಗು ಮೃತಪಟ್ಟ ಪ್ರಕರಣ ಇತ್ತೀಚೆಗೆ ಬೆಂಗಳೂರಿನ ಓ ಫಾರ್ಮ್ ವೃತ್ತದ ಬಳಿ ನಡೆದಿತ್ತು. ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್, ತಾಯಿ-ಮಗು ಸಾವಿಗೆ ಇಲಿ ಕಾರಣ ಎಂದಿದ್ದಾರೆ.

ಔದುಂಬರ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಖಾಸಗಿ ಟ್ರಾನ್ಸ್‌ಫಾರ್ಮರ್ ಅನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇಲಿ ಹೋಗಿ ಹಾಳು ಮಾಡಿದ್ದರಿಂದ ಟ್ರಿಪ್‌ ಆಗಿ ಈ ಅವಘಡ ಉಂಟಾಗಿದೆ ಎಂದು ಜಾರ್ಜ್ ಹೇಳಿದರು. ಈ ವಿದ್ಯುತ್ ಅವಘಡ ಆಗಬಾರದಿತ್ತು. ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ತನಿಖೆಗಾಗಿ 4 ಕಮಿಟಿಗಳನ್ನು ಮಾಡಿದ್ದೇವೆ. ಅಲ್ಲಿನ 5 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪೊಲೀಸರು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ಒಟ್ಟು ಮೂರು ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಬೆಸ್ಕಾಮ್ ಆಂತರಿಕ ತನಿಖೆ ಕೈಗೊಂಡಿದ್ದಾರೆ ಎಂದು ಸಚಿವ ಜಾರ್ಜ್ ಹೇಳಿದ್ದಾರೆ.