Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಧಾನಸೌಧದಲ್ಲಿ ನಮಾಜ್ ಮಾಡಲು ಕೊಠಡಿ ನೀಡಬೇಕು – ಬಿ.ಎಂ. ಫಾರೂಖ್ ಮನವಿ

ಬೆಂಗಳೂರು: ವಿಧಾನಸೌಧದಲ್ಲಿ ನಮಾಜ್ ಮಾಡಲು ಒಂದು ಕೊಠಡಿಯನ್ನು ನೀಡಬೇಕು ಎಂದು ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಖ್ ಮನವಿ ಮಾಡಿದ್ದಾರೆ.

ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲಿ ಶಾಸಕರ ಕಾರುಗಳಿಗೇ ಸ್ಥಳಗಳಿಲ್ಲದಂತೆ ಕಾರುಗಳು ನಿಂತಿರುತ್ತವೆ ಎಂಬ ಕುರಿತು ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಪ್ರಸ್ತಾಪಿಸಿದ ಸಮಯದಲ್ಲಿ ಈ ಮಾತು ಹೇಳಿದರು.

ವಿಧಾನಸೌಧದ ಒಳಗಡೆ ಬರಲು ಆಗುತ್ತಿಲ್ಲ. ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲ. ವಾಹನಗಳು ತುಂಬಿವೆ, ಸದಸ್ಯರ ರಕ್ಷಣೆಗೆ ಸಭಾಪತಿ ಬರಬೇಕು ಎಂದರು. ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಎಚ್.ಕೆ ಪಾಟೀಲ್‌, ಸಭಾಪತಿ ಅವರ ಮುಂದಾಳತ್ವದಲ್ಲಿ ಸಭೆ ಮಾಡಿ ಪೋಲಿಸ್‌ ಅಧಿಕಾರಿಗಳನ್ನು ಕರೆಯೋಣ. ಸಭೆಯಲ್ಲಿ ಪಾರ್ಕಿಂಗ್, ಕ್ಯಾಂಟೀನ್ ಸೇರಿದಂತೆ ಸದಸ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಎಂದರು.

ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ.!

ಈ ವೇಳೆ ಮಧ್ಯಪ್ರವೇಶ ಮಾಡಿದ ಜೆಡಿಎಸ್ ಸದಸ್ಯ ಬಿ. ಎಂ.ಫಾರೂಕ್‌, ನಮಾಜ್‌ ಮಾಡಲು ಒಂದು ಕೊಠಡಿ ಅವಕಾಶ ಮಾಡಿಕೊಡಿ ಎಂದು ಪ್ರಸ್ತಾಪಿಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಶರವಣ ಮಾತನಾಡಿ, ಕ್ಯುಆರ್ ಕೋಡ್ ಅಥವಾ ಇನ್ನಾವುದಾದರೂ ತಂತ್ರಜ್ಞಾನ ಬಳಸಿ ನಕಲಿ ಪಾಸ್‌ ತಡೆಯಬೇಕು ಎಂದರು. ಇದಕ್ಕೆ ಉತ್ತರಿಸಿದ ಎಚ್.ಕೆ. ಪಾಟೀಲ್, ನಕಲಿ ಪಾಸ್ ಗಳು ಹೆಚ್ಚಾಗಿವೆ. ನಮ್ಮ ನಿಮ್ಮೆಲ್ಲರ ಹೆಸರಿನಲ್ಲಿ ದಲ್ಲಾಳಿಗಳು ವಿಧಾನಸೌಧದ ಒಳಗೆ ಬರುತ್ತಿದ್ದಾರೆ . ನಮಗೂ ಜನರಿಗೂ ಅನುಕೂಲ ಮಾಡುವಂತೆ ಸಭೆ ತೀರ್ಮಾನ ಮಾಡಲಾಗುತ್ತದೆ ಎಂದರು.

ಯಾವ ದಳ್ಳಾಳಿಗಳು, ವರ್ಗಾವಣೆ ದಳ್ಳಾಳಿಗಳಾ, ಭೂ ದಳ್ಳಾಳಿಗಳಾ ಎಂದು ಬಿಜೆಪಿ ಸದಸ್ಯ ಮುನಿರಾಜು ಪ್ರಶ್ನಿಸಿದರು. ಪೊಲಿಟಿಕಲ್ ಪಾವರ್ಸ್ ದಳ್ಳಾಳಿಗಳು ಸೇರಿದಂತೆ ಬೇರೆಯವರು ಇದ್ದಾರೆ. ಹೆಸರು ಹೇಳು ಎಂದರೆ ಹೇಳುತ್ತೇನೆ. ದಳ್ಳಾಳಿಗಳು, ಮುಟ್ಟಾಳರನ್ನು ದೂರು ಇಡುವ ಕೆಲಸ ಆಗಬೇಕಿದೆ ಎಂದರು.

ಈ ಕುರಿತು ಸಭಾಪತಿ ಮುಂದಾಳತ್ವದಲ್ಲಿ ಸಭೆ ಮಾಡೋಣ ಎಂದು ಕಾನೂನು ಸಚಿವರು ಹೇಳಿದ್ದಾರೆ. ಹಾಗಾಗಿ ಸದಸ್ಯರೆಲ್ಲರೂ ಚರ್ಚೆ ನಿಲ್ಲಿಸೋಣ ಎಂದು ಉಪಸಭಾಪತಿ ಪ್ರಾಣೇಶ್‌ ತಿಳಿಸಿದರು.