Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ವಿಪಕ್ಷಗಳು ಮುಸ್ಲಿಂ ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ’?- ಪ್ರಧಾನಿ ಆಕ್ರೋಶ

ವಡೋದರಾ:ವಿರೋಧ ಪಕ್ಷದವರಿಗೆ ನಿಜವಾಗಿಯೂ ಮಹಿಳಾ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದಿದ್ದರೆ, ಅವರು ದಶಕಗಳಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಮಹಿಳೆಯರಿಗೆ ಶೌಚಾಲಯದ ಬಗ್ಗೆ ಮಾತನಾಡುವಾಗ ಇದೇ ಜನರು ನನ್ನನ್ನು ಲೇವಡಿ ಮಾಡಿದರು. ನಾನು ಮಹಿಳೆಯರಿಗೆ ಜನ್ ಧನ್ ಖಾತೆಯ ಬಗ್ಗೆ, ಉಜ್ವಲಾ ಯೋಜನೆಯನ್ನು ಘೋಷಿಸಿದಾಗಲೂ ಅಪಹಾಸ್ಯ ಮಾಡಿದರು ಎಂದು ಕಿಡಿಕಾರಿದರು.

ನಾವು ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ನಿಂದ ವಿಮೋಚನೆ ಮಾಡುವ ಬಗ್ಗೆ ಮಾತನಾಡುವಾಗ ಅವರು ತಮ್ಮ ರಾಜಕೀಯ ಸಮೀಕರಣಗಳ ಬಗ್ಗೆ ಕಾಳಜಿ ವಹಿಸಿದ್ದರು.ಅವರಿಗೆ ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ಇರಲಿಲ್ಲ. ಅವರು ಕೇವಲ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಕಾಳಜಿ ವಹಿಸುತ್ತಿದ್ದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಾಗ ಅವರು ಮಹಿಳೆಯರ ಪರವಾಗಾಗಿ ಏಕೆ ನಿಲ್ಲಲಿಲ್ಲ ಎಂದು ವಿಪಕ್ಷಗಳಿಗೆ ಪ್ರಶ್ನಿಸಿದರು.