ವಿಯೆಟ್ನಾಂ ಟ್ರಿಪ್ ಮೂಲಕ ಮತ್ತೇ ಸುದ್ದಿಯಾದ ರಶ್ಮಿಕಾ -ವಿಜಯ್ ಜೋಡಿ
ಹೈದರಬಾದ್: ಡೇಟಿಂಗ್ ನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಫೆಬ್ರವರಿನಲ್ಲಿ ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದುತ್ತಿರುವ ಬೆನ್ನಲ್ಲೇ ಇದೀಗ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಒಂದೇ ತರಹದ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಈ ಜೋಡಿ ವಿಯೆಟ್ನಾಂಗೆ ಜೊತೆಯಾಗಿ ತೆರಳಿತ್ತು ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಇಬ್ಬರೂ ಒಂದೇ ಕಡೆ ಇರುವ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದ್ದರಿಂದ ಇಬ್ಬರ ಪ್ರವಾಸದ ಗುಟ್ಟು ಬಯಲಾಗಿದೆ.
ಈ ಫೋಟೋದಲ್ಲಿ ವಿಜಯ್ ದೇವರಕೊಂಡ ಬೀದಿ ಬದಿ ಆಹಾರ ತಿಂದು ನಗೆ ಬೀರಿದರೇ, ಮತ್ತೊಂದೆಡೆ ರಶ್ಮಿಕಾ ಟೋಪಿ ಧರಿಸಿದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಜೋಡಿಯ ಪೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ಫ್ರೀ ಹನಿಮೂನಾ ಎಂದು ಕಾಲೆಳೆದಿದ್ದರೆ.