ವಿವಾದದ ನಡುವೆ ಮಾಲ್ಡೀವ್ಸ್ ನಲ್ಲಿ ಬರ್ತ್ಡೇ ಆಚರಿಸಿಕೊಂಡ ಬಿಪಾಶಾ
ಮಾಲ್ಡೀವ್ಸ್: ಬಹುದಿನಗಳಿಂದ ನಟನೆಯಿಂದ ದೂರ ಉಳಿದಿದ್ದ ಬೋಲ್ಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ ನ ವಿವಾದದ ನಡುವೆಯೂ ಕುಟುಂಬ ಸಮೇತ ಮಾಲ್ಡೀವ್ಸ್ ನಲ್ಲಿ ತಮ್ಮ 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಆದರೆ ಮಾಲ್ಡೀವ್ಸ್ ನ ವಿವಾದದ ನಡುವೆ ಬಾಲಿವುಡ್ ನಟಿ ಅಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಅನೇಕ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಬಿಪಾಶಾ ತಮ್ಮ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಫೋಟೋಗಳಲ್ಲಿ, ಅವರ ಪತಿ ಕರಣ್, ಮಗಳು ದೇವಿ ಸಹ ಇದ್ದಾರೆ.
ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಪಾಶಾ ಬಸು ‘ನನಗೆ ಪ್ರೀತಿ ಮಾತ್ರ’ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಹೊಂದಲು ನಾನು ಅದೃಷ್ಟಶಾಲಿ. ಎಲ್ಲರಿಗೂ ಧನ್ಯವಾದಗಳು ಎಂದು ಶಿರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ.
ಆದರೆ ಅನೇಕ ನೆಟ್ಟಿಗರು ನಟಿಯ ಫೋಟೋಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಮಾಲ್ಡೀವ್ಸ್ ಸಚಿವರು ನಮ್ಮ ಪ್ರಧಾನಿಯ ಮೇಲೆ ವಿವಾದಾತ್ಮಕ ಕಾಮೆಂಟ್ ಗಳನ್ನು ಮಾಡುವಾಗ ಮಾಲ್ಡೀವ್ಸ್ ಗೆ ಹೋಗಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.