Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿವಾಹವಾಗದವರಿಗೆ ಸರಕಾರದಿಂದ ಸಿಗಲಿದೆ’ಬ್ರಹ್ಮಚಾರಿ’ ಪಿಂಚಣಿ..!

ಹರ್ಯಾಣ: ಹರ್ಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬ್ಯಾಚುಲರ್‌ಗಳಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.

ಹರಿಯಾಣದಲ್ಲಿ ಪ್ರಸ್ತುತ ವೃದ್ಧಾಪ್ಯ ವೇತನ, ವಿಧವಾ ಮತ್ತು ನಿರ್ಗತಿಕ ಪಿಂಚಣಿ, ಅಂಗವಿಕಲರ ಪಿಂಚಣಿ, ನಿರ್ಗತಿಕ ಮಕ್ಕಳಿಗೆ ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ತೃತೀಯ ಲಿಂಗಿಗಳಿಗೆ ಪಿಂಚಣಿ, ಕುಬ್ಜರಿಗೆ ಪಿಂಚಣಿ ಮತ್ತು ಪತ್ರಕರ್ತ ಪಿಂಚಣಿ ನೀಡಲಾಗುತ್ತಿದೆ.

ರಾಜ್ಯ ಸರ್ಕಾರದಿಂದ ಪಡಿತರ ಅಂಗಡಿಗಳಿಂದ ಟೊಮೆಟೊವನ್ನು ಅರ್ಧ ಬೆಲೆಗೆ ಮಾರಾಟ

ಬ್ರಹ್ಮಚಾರಿಗಳಿಗೆ ಪಿಂಚಣಿ ಯೋಜನೆ ಜಾರಿಗೆ ತರಲು ತಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಖಟ್ಟರ್​ ತಿಳಿಸಿದ್ದಾರೆ. 40 ರಿಂದ 60 ವರ್ಷ ವಯೋಮಾನದವರಿಗೆ ಈ ಯೋಜನೆಯನ್ನು ಜಾರಿಗೆ ತರಲು ಬಯಸಿರುವುದಾಗಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಒಂದು ತಿಂಗಳೊಳಗೆ ಈ ಯೋಜನೆ ತರಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಕರ್ನಾಲ್‌ನ ಕಲಂಪುರ ಗ್ರಾಮದಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ 60 ವರ್ಷದ ಬ್ರಹ್ಮಚಾರಿ ತಮಗೆ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿಕೊಂಡರು. ಕನಿಷ್ಠ ಪಿಂಚಣಿಯೂ ಸಿಗುತ್ತಿಲ್ಲ ಎಂದು ಕಷ್ಟವನ್ನು ಹೇಳಿಕೊಂಡಿದ್ದಾರೆ. ಈ ವೇಳೆ ತಮ್ಮ ಸರ್ಕಾರ ಭ್ರಹ್ಮಚಾರಿ ಪಿಂಚಣಿಯ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಖಟ್ಟರ್ ಹೇಳಿದ್ದಾರೆ‌.