Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಹೃದಯಾಘಾತದಿಂದ ಸಾವು

ಚೆನ್ನೈ: ವಿಶಾಖಪಟ್ಟಣಂನಲ್ಲಿರುವ ಇಂದಿರಾಗಾಂಧಿ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿಯೊಂದು ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹೇಶ್ವರಿ ಎಂಬ ಹೆಸರಿನ ಹೆಣ್ಣು ಸಿಂಹ ಶನಿವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸಿಂಹಿಣಿಗೆ ವಯಸ್ಸಾಗಿದ್ದು ಹೃದಯಾಘಾತಗೊಂಡು ಮೃತಪಟ್ಟಿರುವುದಾಗಿ ವೈಜಾಗ್ ಮೃಗಾಲಯದ ಕ್ಯೂರೇಟರ್ ನಂದಾನಿ ಸಲಾರಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2006 ರಲ್ಲಿ ಜನಿಸಿದ ಮಹೇಶ್ವರಿ 2019 ರಲ್ಲಿ ಗುಜರಾತ್‌ನ ಸಕ್ಕರ್‌ಬಾಗ್ ಮೃಗಾಲಯದಿಂದ ವೈಜಾಗ್ ಮೃಗಾಲಯಕ್ಕೆ ತರಲಾಗಿತ್ತು. ಅಧಿಕಾರಿಗಳ ಪ್ರಕಾರ, ಸಿಂಹಗಳು ಕಾಡಿನಲ್ಲಿ ಸುಮಾರು 16 ರಿಂದ 18 ವರ್ಷಗಳವರೆಗೆ ಬದುಕುತ್ತವೆ, ಆದರೆ ಮಹೇಶ್ವರಿ 19 ವರ್ಷಗಳ ಕಾಲ ಯಶಸ್ವಿಯಾಗಿ ಬದುಕಿದೆ ಎಂದು ಹೇಳಿದ್ದಾರೆ.