ವಿಶೇಷ ರೀತಿಯಲ್ಲಿ ವಿನ್ಯಾಸಗೊಂಡ ‘ಮೊಹಬ್ಬತ್ ಕಿ ದುಕಾನ್‘ ಬಸ್, ಟಿಕೆಟ್
ಇಂಫಾಲ್: ಭಾರತ್ ಜೋಡೊ ನ್ಯಾಯ ಯಾತ್ರೆ ಇದೀಗ ಯಾತ್ರೆ ನಾಗ್ಲ್ಯಾಂಡ್ಗೆ ತಲುಪಿದೆ. ಈ ಯಾತ್ರೆಯನ್ನು ಕಾಲ್ನಡಿಗೆ ಮತ್ತು ಬಸ್ ಮೂಲಕ ಕೈಗೊಂಡಿದ್ದು, ರಾಹುಲ್ ಗಾಂಧಿ ಪ್ರಯಾಣಿಸುತ್ತಿರುವ ‘ಮೊಹಬ್ಬತ್ ಕಿ ದುಕಾನ್‘ ಬಸ್ ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಬಸ್ನಲ್ಲಿ ಪ್ರಯಾಣಿಸ ಬೇಕೆಂದುಕೊಂಡವರಿಗೆ ವಿಶೇಷ ಟಿಕೆಟ್ ಅನ್ನು ಕೊಡಲು ಕಾಂಗ್ರೆಸ್ ಪಕ್ಷ ತಿರ್ಮಾನಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆ ಜ.14ರಂದು ಪ್ರಾರಂಭವಾಗಿದೆ. ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿದ್ದು, ಈಗಾಗಲೇ 6,713 ಕಿ.ಮೀ. ಕ್ರಮಿಸಲಿದೆ. ಮಾರ್ಚ್ 20 ಅಥವಾ 21ರಂದು ಯಾತ್ರೆ ಮುಂಬೈನಲ್ಲಿ ಕೊನೆಗೊಳ್ಳಲಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಅವರ ಚಿತ್ರ ಮತ್ತು ಅವರ ಸಹಿಯನ್ನು ಈ ವಿಶೇಷ ಟಿಕೆಟ್ ಹೊಂದಿದ್ದು, ಇದರ ಫೋಟೋವನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಬಸ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಜನರೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಹೈಡ್ರಾಲಿಕ್ ಲಿಫ್ಟ್ ಅನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.