Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜೋಸ್ ಪಾಲಿನೊ ಗೋಮ್ಸ್ ನಿಧನ

ಬ್ರೆಜಿಲ್ : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನ್ನಲಾದ ಬ್ರೆಜಿಲ್ ಮೂಲದ ಜೋಸ್ ಪಾಲಿನೊ ಗೋಮ್ಸ್ (127) ತಮ್ಮ ನಿವಾಸ ಪೆಡ್ರಾಬೊನಿಟಾದಲ್ಲಿ ನಿಧನರಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಗೋಮ್ಸ್ ಬದುಕಿದ್ದರೆ ಆ.4 ರಂದು ತನ್ನ ಹುಟ್ಟುಹಬ್ಬ ಆಚರಿಸುವುದರಲ್ಲಿದ್ದರು ಎಂದು ಅವರ ಕುಟುಂಬ ತಿಳಿಸಿದೆ. ಗೋಮ್ಸ್ ಮದುವೆಯ ಪ್ರಮಾಣ ಪತ್ರದ ಪ್ರಕಾರ ಆ.4, 1895 ರಲ್ಲಿ ಜನಿಸಿದ್ದರು. ತನ್ನ ಜೀವಿತಾವಧಿಯಲ್ಲಿ ಮಹಾಯುದ್ಧ ಮತ್ತು ಕೋವಿಡ್ ಎರಡನ್ನೂ ಕಣ್ಣಾರೆ ಕಂಡ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.