ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಭೀಕರ ಅಗ್ನಿ ದುರಂತ – 14 ಜನರ ದುರ್ಮರಣ
ಇರಾಕ್ : ಇರಾಕ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 14 ಜನ ಮೃತಪಟ್ಟಿದ್ದು, 18 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇರಾಕ್ನ ಉತ್ತರ ನಗರ ಎರ್ಬಿಲ್ ಬಳಿಯ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಎರ್ಬಿಲ್ನ ಪೂರ್ವದಲ್ಲಿರುವ ಸಣ್ಣ ನಗರ ಸೊರಾನ್ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸೊರಾನ್ ಆರೋಗ್ಯ ನಿರ್ದೇಶನಾಲಯದ ಮುಖ್ಯಸ್ಥ ಕಾಮರಾಮ್ ಮುಲ್ಲಾ ಮೊಹಮ್ಮದ್ ತಿಳಿಸಿದ್ದಾರೆ.