Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವೆಂಕಟೇಶ್ ಕ್ಷತ್ರಿಯ ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ

 

ಹೊಸಪೇಟೆ: ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನವರಾದ ವೆಂಕಟೇಶ್ ಕ್ಷತ್ರಿಯ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯ  ಅಧ್ಯಯನ ವಿಭಾಗದ ಡಾ.ವೈ.ಚಂದ್ರ ಬಾಬು ಅವರ ಮಾರ್ಗದರ್ಶನದಲ್ಲಿ “ಕನ್ನಡ ಹವ್ಯಾಸಿ ರಂಗ ಭೂಮಿ ಪರಂಪರೆ ಮತ್ತು ರಂಗಭಾರತಿ; ಸಾಂಸ್ಕ್ರತಿಕ ಅಧ್ಯಯನ” ಎಂಬ ವಿಷಯ ಪ್ರಬಂಧ ಮಂಡನೆಗೆ ಬುಧವಾರರಂದು ನಡೆದ 32ನೇ ನುಡಿಹಬ್ಬದಲ್ಲಿ ವಿವಿಯು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಡಾ.ಎಂ.ಸಿ.ಸುಧಾಕರ, ಘಟಿಕೋತ್ಸವ ಭಾಷಣಕಾರರಾದ ಕೇಂದ್ರೀಯ ವಿಶ್ವವಿದ್ಯಾಲಯ ಆಂಧ್ರ ಪ್ರದೇಶ ಅನಂತಪುರನ ಕುಲಪತಿಗಳಾದ ಡಾ ಎಸ್.ಎ.ಕೋರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ  ಡಾ. ಡಿ.ವಿ.ಪರಮಶಿವಮೂರ್ತಿ, ನಾಡೋಜ ಗೌರವ ಪದವಿ ಪುರಸ್ಕೃತರಾದ ಡಾ.ಬಸವಲಿಂಗ ಪಟ್ಟದ್ದೇವರು, ಡಾ. ತೇಜಸ್ವಿ ವಿ.ಕಟ್ಟೀಮನಿ, ಡಾ. ಎಸ್.ಸಿ.ಶರ್ಮಾ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಸೇರಿದಂತೆ ಕಾರ್ಯಕಾರಿ ಸಮಿತಿ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಆಹ್ವಾನಿತ ಗಣ್ಯರು, ಬೋಧಕ ಹಾಗೂ ಆಡಳಿತ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.