ಶಾನ್ವಿ ಜೊತೆ ಯುಎಸ್ ಗೆ ಹಾರಿದ ನಟ ಪೃಥ್ವಿ ಅಂಬರ್
ಬೆಂಗಳೂರು : ಹೌದು ಅಮೆರಿಕಾ ಅಮೆರಿಕಾ ಚಿತ್ರದ ಪಾರ್ಟ್ 2 ಎಂದು ಹೇಳಲಾಗುತ್ತಿರುವ ಈ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಟ್ರಯಾಂಗಲ್ ಲವ್ ಸ್ಟೋರಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ್, ಪೃಥ್ವಿ ಅಂಬರ್ ಪ್ರಮುಖ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ.
ಯುಎಸ್‌ನ ಸುಂದರ ತಾಣಗಳಲ್ಲಿ ಶಾನ್ವಿ ಮತ್ತು ನಟ ಪೃಥ್ವಿ ಅಂಬರ್ ಜೊತೆ ಶೂಟಿಂಗ್ ಭರದಿಂದ ಸಾಗುತ್ತಿದೆ.
ಅಮೆರಿಕಾ ಅಮೆರಿಕಾ’ ಸಿನಿಮಾ ತೆರೆಕಂಡು 26 ವರ್ಷಗಳಾಗಿದೆ. ರಮೇಶ್ ಅರವಿಂದ್, ಹೇಮಾ, ಅಕ್ಷಯ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
1997ರಲ್ಲಿ ಈ ಚಿತ್ರವನ್ನ ಫ್ಯಾನ್ಸ್ ಮೆಚ್ಚಿಕೊಂಡಿದ್ದರು.