ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿ ತಿಂಗಳುಗಳೆ ಕಳೆದು ಹೋಗಿವೆ. ಆಗಾಗ ಮಾದ್ಯಮಗಳಲ್ಲಿ ಈ ವಿಚಾರವಾಗಿ ಸುದ್ದಿಗಳು ಬರುತ್ತಿರುತ್ತವೆ. ಆದರೆ ಒಂದು ಖಾಸಗಿ ಟಿವಿ ಚಾನೆಲ್ ಈ ವಿಷಯವಾಗಿ ಅಂದರೆ ಶಾಲೆ ಕಾಲೇಜು ತೆರೆಯುವ ವಿಚಾರದಲ್ಲಿ ಜನರನ್ನು ತಪ್ಪು ದಾರಿ ಹಿಡಿಸುತ್ತಿದೆ ಎಂದು ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿ, ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಮೂಲಕ ಅವರು ಸರ್ಕಾರ ಶಾಲಾ ಕಾಲೇಜು ಮತ್ತು ಅನ್ಲೈನ ತರಗತಿಗಳು ಕುರತಾಗಿ ಇನ್ನೂ ಯಾವ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಚಿವರು ತಮ್ಮ ಪೋಸ್ಟ್ ನಲ್ಲಿ, ಒಂದು ಖಾಸಗಿ ಟಿವಿ ಚಾನೆಲ್ ಇಂದು ರಾತ್ರಿ 9.00 ಗಂಟೆಗೆ ನನ್ನ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ತೇಜೋವಧೆ ಮಾಡುವ ಪ್ರಯತ್ನ‌ ಮಾಡಿರುವುದು ನನಗೆ ವೇದನೆ ತಂದಿದೆ. ಶಾಲೆಗಳನ್ನು ಸಧ್ಯಕ್ಕೆ ಪ್ರಾರಂಭ ಮಾಡುವ ನಿರ್ಧಾರ ನಮ್ಮ ಸರ್ಕಾರ ಕೈಗೊಂಡಿಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತೇನೆ. ಆ ಯೋಚನೆಯೇ ಸರಕಾರದ ಮುಂದಿಲ್ಲ ಎಂಬುದನ್ನು ಪದೇ ಪದೇ ಹೇಳಿದ್ದರೂ ಈ ಸುಳ್ಳು ಮಾಹಿತಿಯೇಕೆ? ಹಾಗೆಯೇ ಆನ್-ಲೈನ್ ಕುರಿತೂ ಸರಕಾರ ಯಾವುದೇ ನಿರ್ಧಾರ ಘೋಷಿಸಿಲ್ಲ.

ತಜ್ಞರ ಸಮಿತಿ ವರದಿ ಸರಕಾರದ ನಿರ್ಧಾರವಲ್ಲ.
ಮೇಲಾಗಿ ಆನ್ ಲೈನ್ ಕುರಿತು ಹೈಕೋರ್ಟಿನಲ್ಲಿ ವಿಚಾರಣೆ ಮುಗಿದಿದ್ದು ತೀರ್ಪು ಬರಬೇಕಿದೆ.
ಅನಗತ್ಯವಾಗಿ ಜನರಲ್ಲಿ ಗೊಂದಲ ನಿರ್ಮಿಸಿ ನನ್ನ ಮೇಲೆ ಸಂಪೂರ್ಣ ಅಪಾರ್ಥ ಬರುವಂತೆ ಮಾಡಿರುವುದು, ನನಗೆ ಫೋನ್ ಕರೆಗಳ ಘೇರಾವ್ ಮಾಡಿ ಎಂದು ವೀಕ್ಷಕರಿಗೆ ಪ್ರಚೋದನೆ ನೀಡಿರುವುದು ಸರಿಯಲ್ಲ ಎಂದು ಬರೆದು ಸಾರ್ವಜನಿಕರಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here