ನಾತಿ ಚರಾಮಿ ಶೃತಿಹರಿಹರನ್ ಹಾಗೂ ಸಂಚಾರಿ ವಿಜಯ್ ಅಭಿನಯದ ಒಂದು ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಆಗಿ ಮೂಡಿಬಂದಿದೆ. ಇನ್ನು ಈ ಚಿತ್ರವನ್ನು‌‌‌ ನಿರ್ದೇಶಿಸಿದವರು ಯುವ ನಿರ್ದೇಶಕ ಮಂಸೂರೆ. ಒಂದೆಡೆ ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆ ಬಂದರೂ, ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣವಾದ ಬುಕ್ ಮೈ ಶೋ ದಲ್ಲಿ ನಕಾರಾತ್ಮಕವಾದ ಟೀಕೆಗಳು ವ್ಯಕ್ತವಾಗಿದ್ದು, ಇದು ಚಿತ್ರ ತಂಡದ ಮೇಲೆ ಪ್ರಭಾವ ಬೀರಿದ್ದು, ಅವರ ಅಸಮಾಧಾನಕ್ಕೆ ಕಾರಣವಾಗಿದೆ ಹಾಗೂ ಒಂದು ರೀತಿಯಲ್ಲಿ ಅವರ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಅವರಿಗೆ ಸಿಗುತ್ತಿಲ್ಲ ಎಂಬ ಕೋಪ ಕೂಡಾ ಚಿತ್ರತಂಡದಲ್ಲಿ ಕಂಡಿದೆ.

ಯುವ ನಿರ್ದೇಶಕ, ವಿಭಿನ್ನ ಕಥಾ ಹಂದರ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಎಲ್ಲಾ ಇದ್ದುದ್ದರಿಂದ ಸಹಜವಾಗಿಯೇ ಚಿತ್ರ ಬಹಳ‌ ಕುತೂಹಲವನ್ನು ಕೆರಳಿಸಿತ್ತು. ಆದರೆ ಚಿತ್ರದ ನಾಯಕಿ ಶೃತಿ ಹರಿಹರನ್‌ . ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ ನಂತರ ಅವರನ್ನೇ ದೃಷ್ಟಿಯಲ್ಲಿಟ್ಟುಕೊಂಡ ಹಲವರು ಟೀಕಿಸಿದ್ದಾರೆ. ಟ್ರೈಲರ್ ಕುತೂಹಲ ಮೂಡಿಸಿತ್ತು, ಬಿಡುಗಡೆಯ ನಂತರವೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿ, ಉತ್ತಮ ಪ್ರಶಂಸೆಗೆ ನಟ‌ ನಟಿಯರು ಪಾತ್ರರಾಗಿದ್ದಾರೆ. ಆದರೆ ಬುಕ್ ಮೈ ಶೋ ನಲ್ಲಿ ಮಾತ್ರ ಕೆಲವರು ನಕಾರಾತ್ಮಕವಾಗಿ ರಿವ್ಯೂಗಳನ್ನು ನೀಡಿರುವುದು ಚಿತ್ರ ತಂಡಕ್ಕೆ ಅಸಮಾಧಾನ ಉಂಟು ಮಾಡಿದೆ.

ರಿವ್ಯೂ ನಲ್ಲಿ ಶೃತಿ ಹರಿಹರನ್ ವಿರುದ್ಧ ತಮ್ಮ ಅಸಮಾಧಾನವನ್ನು ಕೆಲವರು ಹೊರಹಾಕಿದ್ದಾರೆ. ಚಿತ್ರವನ್ನು ಶೃತಿಯವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಶೃತಿ ಹರಿಹರನ್ ಇರುವುದರಿಂದ ಚಿತ್ರ ವೀಕ್ಷಿಸುವುದಿಲ್ಲ ಎಂದಿದ್ದಾರೆ. ಇದರಿಂದ ಚಿತ್ರ ತಂಡ ಮಾತನಾಡಿ ಯಾರದೋ ತಪ್ಪಿಗೆ ಮತ್ಯಾರನ್ನೋ ಗುರಿಯಾಗಿಸುವುದು ತಪ್ಪು , ಬಂಡವಾಳ ಹಾಕಿದವರಿಗೆ , ಕಷ್ಟ ಪಟ್ಟು ಸಿನಿಮಾ ಮಾಡಿದವರಿಗೆ ಅದರ ಕಷ್ಟ ಏನೆಂಬುದರ ಅರಿವಿರುತ್ತದೆ. ಒಬ್ಬರ ಮಾತಿಗೆ ಇಡೀ ಚಿತ್ರವೇ ಸರಿಯಿಲ್ಲ, ನೋಡಬೇಡಿ ಎಂಬುದು ಸರಿಯಲ್ಲ ಎಂದು ಚಿತ್ರ ತಂಡ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here