Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶೆಲ್ ಕಂಪೆನಿಯ ಡೀಸೆಲ್ ದರ ಒಂದೇ ವಾರದಲ್ಲಿ 20 ರೂ. ಏರಿಕೆ

ನವದೆಹಲಿ: ಭಾರತದಲ್ಲಿ ಶೆಲ್‌ ಕಂಪನಿಯ ಡೀಸೆಲ್ ದರವನ್ನು ಒಂದೇ ವಾರದಲ್ಲಿ 20 ರೂ. ಹೆಚ್ಚಿಸಿದೆ. ಇದಾದ ನಂತರ ಮುಂಬೈನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 135 ರೂ.ಗೆ ತಲುಪಿದೆ.

ಹೌದು, ಸರ್ಕಾರಿ ಬಂಕ್ ಗಳಲ್ಲಿ ಹೆಚ್ಚಳವಾಗದ ಡೀಸೆಲ್ ಬೆಲೆ ಮಾತ್ರ, ಖಾಸಗಿ ಶೆಲ್ ಬಂಕ್ ಗಳಲ್ಲಿ ಒಂದೇ ವಾರದಲ್ಲಿ ರೂ.20 ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗೆ ಏರಿಕೆಯಾಗಿರುವ ಹಿನ್ನಲೆಯಲ್ಲಿ, ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡಲಾಗಿದೆ. ಶೆಲ್ ಬಂಕ್ ಗಳಲ್ಲಿ ಕೇವಲ ಒಂದು ವಾರದಲ್ಲೇ ಪ್ರತಿ ಲೀಟರ್ ಡೀಸೆಲ್ ಗೆ ಬರೋಬ್ಬರಿ 20 ರೂ.ನಷ್ಟು ಹೆಚ್ಚಳ ಮಾಡಿ, ಡೀಸೆಲ್ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ರೂ.20ರಷ್ಟು ಡೀಸೆಲ್ ಹೆಚ್ಚಳ ಮಾಡಿದ ಕಾರಣ ಶೆಲ್ ಬಂಕ್ ಗಳಲ್ಲಿ ಬೆಂಗಳೂರಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.122 ತಲುಪಿದ್ರೇ, ಮುಂಬೈನಲ್ಲಿ ರೂ.130, ಚೈನ್ನೈನಲ್ಲಿ ರೂ.129ರಷ್ಟು ತಲುಪಿದೆ. ಅನಂತರ 22ರಂದು ಅವರು ಪಪುವಾ ನ್ಯೂಗಿನಿಯಾಗೆ ತೆರಳಿ ಇಲ್ಲಿ ಇಂಡಿಯಾ ಪೆಸಿಫಿಕ್‌ ದ್ವೀಪಗಳ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಹಂತದಲ್ಲಿ ಮೇ 23ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.