Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶೇಂಗಾ ಬೆಳೆಯುವ ರೈತರು  ಅನುಸರಿಸಬೇಕಾದ ಸುಧಾರಿತ ತಂತ್ರಜ್ಞಾನದ ಕುರಿತು ತರಬೇತಿ .!

 

ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿಕೇಂದ್ರದಲ್ಲಿ ಇದೇ ಫೆ.7ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಶೇಂಗಾ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ತಂತ್ರಜ್ಞಾನದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಖಿಲ ಭಾರತ ಸಮನ್ವಯ ಶೇಂಗಾ ಸಂಶೋಧನಾ ಪ್ರಯೋಜನೆಯಡಿ ಬಬ್ಬೂರುಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಜಿಲ್ಲಾ ಕೃಷಿ ತರಬೇತಿಕೇಂದ್ರ, ಬಬ್ಬೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಡಾ. ಹರೀಶ್ ಬಾಬು, ಶೇಂಗಾ ತಳಿ ವಿಜ್ಞಾನಿ ಇವರು ಶೇಂಗಾ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ, ಡಾ. ವಿಜಯ್‍ದಾನರೆಡ್ಡಿ, ತಾಂತ್ರಿಕ ಅಧಿಕಾರಿ ಇವರು ಶೇಂಗಾ ಬೆಳೆಯ ಪ್ರಮುಖ ಕೀಟ ಮತ್ತು ರೋಗ ನಿರ್ವಹಣೆ ಬಗ್ಗೆ ಮತ್ತು ಡಾ. ರಾಜಶೇಖರ ಭಾರ್ಕೆರ, ಸಹಾಯಕ ಪ್ರಾಧ್ಯಾಪಕರು, ಕೃಷಿ ಇಂಜಿನಿಯರಿಂಗ್ ವಿಭಾಗ, ತೋಟಗಾರಿಕೆ ಮಹಾ ವಿದ್ಯಾಲಯ, ಬಬ್ಬೂರು ಇವರು ಶೇಂಗಾ ಬೆಳೆಯಲ್ಲಿ ಬಳಸಬಹುದಾದ ಸುಧಾರಿತ ಕೃಷಿ ಯಾಂತ್ರೋಪಕರಣಗಳ ಕುರಿತು ವಿಷಯ ಮಂಡನೆ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಆಸಕ್ತ 50 ಜನ ರೈತಭಾಂದವರು ತರಬೇತಿಯಲ್ಲಿ ಭಾಗವಹಿಸಲು ಶ್ರೀ ರಜನೀಕಾಂತ. ಆರ್ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿಕೇಂದ್ರ, ಬಬ್ಬೂರು ಫಾರಂ (8277931058), ಶ್ರೀಮತಿ ಎಂ.ಉಷಾರಾಣಿ, ಸಹಾಯಕ ಕೃಷಿ ನಿರ್ದೇಶಕರು (ರೈ.ಮ) 9980730696,       ಟಿ.ಪಿ.ರಂಜಿತಾ, ಕೃಷಿ ಅಧಿಕಾರಿ (8277930959), ಸಿಕಂದರ್ ಬಾಷಾ, ಕೃಷಿ ಅಧಿಕಾರಿ (8277931058) ಮತ್ತು ಪವಿತ್ರಾ ಎಂ. ಜೆ. (9535412286) ರವರದೂರವಾಣಿ ಸಂಖ್ಯೆಗೆಕರೆ ಮಾಡಿ ನೋಂದಾಯಿಸಿ ಸದರಿತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ.ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತ ಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.