Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಶ್ರೀರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲ’-ಮೋದಿ

ನವದೆಹಲಿ: ಶ್ರೀ ರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲವಾಗಿದೆ. ಹೀಗಾಗಿಯೇ ನಾನು ಜ. 22ರಂದು ಅಯೋಧ್ಯೆಯಲ್ಲಿ ದೇವರಿಂದ ದೇಶ ಮತ್ತು ರಾಮನಿಂದ ರಾಷ್ಟ್ರದ ಬಗ್ಗೆ ಮಾತನಾಡಿದ್ದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ವರ್ಷದ ಮೊದಲ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ರಾಮಮಂದಿರಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಳ್ಳುವ ಮುಖಾಂತರ ಕೋಟ್ಯಾಂತರ ಜನರನ್ನು ಒಗ್ಗೂಡಿಸಿದೆ. ಇದರೊಂದಿಗೆ ದೇಶದ ಸಾಮೂಹಿಕ ಶಕ್ತಿಯನ್ನು ತೋರ್ಪಡಿಸಿದೆ ಎಂದು ಹೇಳಿದರು.

ಇಡೀ ದೇಶವೇ ರಾಮ ಜ್ಯೋತಿಯನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸುವ ಮೂಲಕ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಣೆಗೆ ಮೆರುಗನ್ನು ನೀಡಿದ್ದಾರೆ. ಈ ಮೂಲಕ ಎಲ್ಲರ ಭಾವನೆಯೂ, ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ಹಾಗೂ ಹೃದಯದಲ್ಲೂ ರಾಮನಿದ್ದಾನೆ ಎಂದು ಸಾಬೀತಾಗಿದೆ ಎಂದರು.

ಅನೇಕ ಜನರು ರಾಮಮಂದಿರದ ಉದ್ಘಾಟನೆ ದಿನದಂದು ರಾಮ ಭಜನೆಗಳನ್ನು ಹಾಡಿರುವುದು ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಅಭಿವೃದ್ಧಿ ಹೊಂದಿದ ಭಾರತ ಎಂಬ ನಮ್ಮ ಪ್ರತಿಜ್ಞೆಯ ಆಧಾರವಾಗಿದೆ ಎಂದು ಅವರು ತಿಳಿಸಿದರು.c