ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ
ನವದೆಹಲಿ: ಸಮುದ್ರದ ಗಡಿ ದಾಟಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಮೇಲೆ 9 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ತಮಿಳುನಾಡಿನ ಮಂಡಪಂ ನಿವಾಸಿಗಳಾದ ಮೀನುಗಾರರು ಅಂತರಾಷ್ಟ್ರೀಯ ಸಮುದ್ರ ಗಡಿ ಉಲ್ಲಂಘಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ ಎಂದು ರಾಜ್ಯ ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದ್ದಾರೆ.ಮೀನುಗಾರರು ಸೋಮವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದರು ಮತ್ತು ನಿನ್ನೆ ತಡರಾತ್ರಿ ಕಚ್ಚತೀವು ಮತ್ತು ನೆಡುಂತೀವು ನಡುವೆ ಬಂಧಿಸಲಾಗಿದೆ ಎರಡು ಯಾಂತ್ರೀಕೃತ ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಹೇಳಿದ್ದಾರೆ.