Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸ್ವಾಮಿಗಳಿಗೆ  ನವಂಬರ್16 ರಿಂದ ಜನವರಿ 13  ರ ತನಕ ಅನ್ನದಾನ ಸಂತರ್ಪಣೆ.!

 

ಚಿತ್ರದುರ್ಗ: ಮೆದೆಹಳ್ಳಿರಸ್ತೆಯಲ್ಲಿರುವ   ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ     24 ನೇ ವರ್ಷದ    ಬ್ರಹ್ಮೋತ್ಸವದ ಪೂಜಾ ಕಾರ್ಯಕ್ರಮದ ಪ್ರಯುಕ್ತ ಮಾಲಾಧಾರಿ ಸ್ವಾಮಿಗಳಿಗೆ ಪ್ರತಿನಿತ್ಯ ಅನ್ನದಾನ ಕಾರ್ಯಕ್ರಮವನ್ನು  ದಿನಾಂಕ  ನವಂಬರ್16 ರಿಂದ ಜನವರಿ 13  ರ ತನಕ ದೇವಸ್ಥಾನದಲ್ಲಿ ನೆರವೇರಲಿದೆ.  

ದಿನಾಂಕ 16.11.2023 ಗುರುವಾರದಂದು  ಇದರ ಉದ್ಘಾಟನೆಯನ್ನು ಖ್ಯಾತ ಉದ್ಯಮಿ ಮಾತ ಏಜೆನ್ಸಿ  ಟಿ  ಮಹಂತೇಶ್ ರವರು ನೆರವೇರಿಸಲಿದ್ದಾರೆ ಇದರ ಅಧ್ಯಕ್ಷತೆಯನ್ನು ಶರಣ ಕುಮಾರ್ ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ  ಟ್ರಸ್ಟ್ ವಹಿಸುವರು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಬೆಳಿಗ್ಗೆ 11:00ಗೆ ಗಣ ಹೋಮ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಪೂಜಾ ಕಾರ್ಯಕ್ರಮವಿರುತ್ತದೆ. ಮಧ್ಯಾಹ್ನ 12:30 ಗಂಟೆಗೆ ಪೂರ್ಣಾವತಿ ಕಾರ್ಯಕ್ರಮ ತದನಂತರ ಪ್ರಸಾದ ವ್ಯವಸ್ಥೆ ಇರುತ್ತದೆ.

ಪೂರ್ಣಾವತಿಗೆ ಸೀರೆ ಕುಪ್ಪಸ  ಬೆಲ್ಲ ಅಕ್ಕಿ ದವಸ ಧಾನ್ಯಗಳನ್ನು ಭಕ್ತಾದಿಗಳು ಸಮರ್ಪಿಸಬಹುದು.  ಈ ಎಲ್ಲಾ ಪೂಜಾ ಕಾರ್ಯಕ್ರಮ  ದಲ್ಲಿ  ಸಕಲ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ  ವಿನಂತಿಸುತ್ತೇವೆ . ಅಧ್ಯಕ್ಷರು  ಶರಣ್ ಕುಮಾರ್    .ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ್   ಅಧ್ಯಕ್ಷರಾದ ಮಲ್ಲಿಕಾರ್ಜುನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಸಕಲ ಪೂಜೆಯ ಹೆಚ್ಚಿನ ಮಾಹಿತಿಗಾಗಿ  ಕಾರ್ಯದರ್ಶಿ ವೆಂಕಟೇಶ್ M P  9342310469  ಸಂಪರ್ಕಿಸಬಹುದು.