Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಂಶೋಧನಾ ಮಹಾಪ್ರಬಂಧಕ್ಕಾಗಿ ಪಿಹೆಚ್‌ಡಿ ಪಡೆದ ಗಾಯಿತ್ರಿ

 

ಹೊಸಪೇಟೆ : ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮಾಗಳ ಗ್ರಾಮದ ಗಾಯತ್ರಿ ಚೆನ್ನವೀರಯ್ಯ ಕುಲಕರ್ಣಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.

ಜೆಎಸ್‌ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜೆ.ಎ. ಹಡಗಲಿ ಅವರ ಮಾರ್ಗದರ್ಶನದಲ್ಲಿ ಗಾಯತ್ರಿ ಅವರು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ “ಕನ್ನಡ ಚಲನಚಿತ್ರ ಗೀತೆಗಳಲ್ಲಿ ಮಹಿಳಾ ಪ್ರತಿನಿಧೀಕರಣ” ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂದಕ್ಕೆ ಪಿಹೆಚ್‌ಡಿ ಪ್ರದಾನ ಮಾಡಲಾಗಿದೆ.

ಪ್ರಸ್ತುತ ಅವರು ಧಾರವಾಡದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.