Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪರಸ್ಪರ ಮುಖಾಮುಖಿಯಾಗಲು ಸರ್ಕಾರ ಮತ್ತು ವಿರೋಧ ಪಕ್ಷಗಳು ಸಜ್ಜಾಗಿವೆ. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ರಾಜ್ಯದಲ್ಲಿ ಮಳೆ ಬಂದು ಜಲಪ್ರಳಯವಾಗುತ್ತೆ ಎಂದು ಭವಿಷ್ಯ ನುಡಿದ ಕೋಡಿಮಠ ಶ್ರೀ

ಈ ಕುರಿತು ಟ್ವೀಟ್‌ ಮಾಡಿರುವ ಅವರು ಸಂಸತ್ತಿನ ಮುಂಗಾರು ಅಧಿವೇಶನ 2023 ಜುಲೈ 20ರಿಂದ ಪ್ರಾರಂಭವಾಗಿ, ಆಗಸ್ಟ್ 11 ರವರೆಗೆ ನಡೆಯುತ್ತದೆ. ದೇಶದ ಅಭಿವೃದ್ಧಿಯ ಪಥದಲ್ಲಿ ಅನುಕೂಲವಾಗಲಿರುವ ಚರ್ಚೆ ಹಾಗೂ ನಿರ್ಧಾರಗಳು ಆಗಲಿವೆ ಎಂಬ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ. ಈ ಅಧಿವೇಶನವು 23 ದಿನಗಳ ಕಾಲ ನಡೆಯಲಿದ್ದು, 17 ಸಭೆಗಳನ್ನು ಹೊಂದಿರುತ್ತದೆ. ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಹೊಸ ಸಂಸತ್ತಿನ ಕಟ್ಟಡವು ಮುಂಬರುವ ಮುಂಗಾರು ಅಧಿವೇಶನಕ್ಕೆ ಆತಿಥ್ಯ ವಹಿಸಲಿದೆ.