ಸಂಸತ್ ಒಳ ನುಗ್ಗುವ ಮೊದ್ಲು ಸೋಷಿಯಲ್ ಮೀಡಿಯಾದಲ್ಲಿ ‘ಆರೋಪಿ’ ಹಾಕಿದ್ದ ‘ಪೋಸ್ಟ್’ ವೈರಲ್
ನವದೆಹಲಿ : ಸಂಸತ್ತಿನ ಒಳನುಗ್ಗುವವರಲ್ಲಿ ಒಬ್ಬರಾದ ಸಾಗರ್ ಶರ್ಮಾ, ಬುಧವಾರ ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆಗೆ ಮೊದಲು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಗೆಲುವು ಅಥವಾ ಸೋಲನ್ನ ಲೆಕ್ಕಿಸದೆ ಪ್ರಯತ್ನ ಮಾಡುವುದು ಮುಖ್ಯ ಎಂದು ಬರೆದಿದ್ದು, ಸಧ್ಯ ಇದು ವೈರಲ್ ಆಗಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಅವರು ಹಿಂದಿಯಲ್ಲಿ, “ಜೀತೆ ಯಾ ಹರೇ, ಪರ್ ಕೋಶಿಶ್ ತೋ ಜರೂರಿ ಹೈ” (ನೀವು ಗೆದ್ದರೂ ಅಥವಾ ಸೋತರೂ ಪ್ರಯತ್ನ ಮಾಡುವುದು ಮುಖ್ಯ) ಎಂದು ಬರೆದು ಪೋಸ್ಟ್ ಮಾಡಿದ್ದಾನೆ.
ಮತ್ತೊಂದು ಪೋಸ್ಟ್ನಲ್ಲಿ ಆತ ತನ್ನ ಕನಸುಗಳನ್ನ ಸಾಕಾರಗೊಳಿಸಲು ಶ್ರಮಿಸುವ ಬಗ್ಗೆ ಉಲ್ಲೇಖವನ್ನು ಹಂಚಿಕೊಂಡಿದ್ದಾನೆ.
ಹಿಂದಿಯಲ್ಲಿಇನ್ನೊಂದು ಉಲ್ಲೇಖ ಹೀಗಿತ್ತು, “ಜೀವನದಲ್ಲಿ ಸುಂದರವಾದದ್ದು ಏನಾದ್ರು ಇದ್ದರೆ, ಅದು ಕನಸುಗಳು. ಹಗಲು ರಾತ್ರಿ, ನಾವು ಯಾವುದಕ್ಕಾಗಿ ಬದುಕುತ್ತಿದ್ದೇವೆ ಎಂಬುದನ್ನ ಅವು ನಮಗೆ ನೆನಪಿಸುತ್ತವೆ. ಕನಸುಗಳಿಲ್ಲದೆ, ಜೀವನವು ಅರ್ಥಹೀನವಾಗಿದೆ ಮತ್ತು ನಿಮ್ಮ ಕನಸುಗಳ ಕಡೆಗೆ ಶ್ರಮಿಸದಿರುವುದು ಇನ್ನೂ ನಿರರ್ಥಕವಾಗಿದೆ” ಎಂದು ಪೋಸ್ಟ್ ಮಾಡಿದ್ದಾನೆ.