ಸತ್ತಲ್ಲಿಂದ ಎದ್ದು ಬಂದಳೇ ನಟಿ ಪೂನಂ ಪಾಂಡೆ..! ನಾನು ಸತ್ತಿಲ್ಲ- ಪೂನಂ ಸ್ಪಷ್ಟನೆ
ನಟಿ, ಮಾಡೆಲ್ ಪೂನಂ ಪಾಂಡೆಯ ಸಾವಿನ ವರದಿ ಶುಕ್ರವಾರ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಶನಿವಾರ ಆಕೆ ಸ್ವತಃ ಇನ್’ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದ್ದಾಳೆ.
ವಿವಾದದಿಂದಲೇ ಸುದ್ದಿಯಾಗಿದ್ದ ನಟಿ, ಮಾಡೆಲ್ ಇದೀಗ ಹೊಸ ಗಿಮಿಕ್ ಪ್ರಯೋಗಿಸಿದ್ದಾಳೆ. ಅದೂ, ಗರ್ಭಕಂಠದ ಕ್ಯಾನ್ಸರ್ ಬಗೆಗಿನ ಜಾಗೃತಿಯಂತೆ.
ಗರ್ಭಕಂಠ ಕ್ಯಾನ್ಸರಿಗೆ ಸೂಕ್ತ ಔಷದೋಪಚಾರ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ತಾನು ಸತ್ತಂತೆ ನಟಿಸಬೇಕಾಯಿತು ಎಂದು ಉತ್ತರಪ್ರದೇಶದ ಕಾನ್ಪುರ ನಿವಾಸಿ, 32ರ ಹರೆಯದ ಪೂನಂ ಪಾಂಡೆ ಹೇಳಿಕೊಂಡಿದ್ದಾಳೆ.