ಸಪ್ತಪದಿ ತುಳಿದ ಹಾಸ್ಯನಟ ನಾಗಭೂಷಣ್
ಬೆಂಗಳೂರು: ಸ್ಯಾಂಡಲ್ವುಡ್ನ ಹಾಸ್ಯನಟ ನಾಗಭೂಷಣ್ ಅವರು ಬಹುಕಾಲದ ಗೆಳತಿ ಪೂಜಾ ಪ್ರಕಾಶ್ ಜೊತೆ ಇಂದು ಬೆಳಗಾವಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟಗರು ಪಲ್ಯ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ನಾಗಭೂಷಣ್, ಅನೇಕ ಚಿತ್ರದಲ್ಲಿ ಹಾಸ್ಯ ನಟನೆ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದು, ಇತ್ತೀಚೆಗಷ್ಟೇ ಇವರ ಹೊಸ ನಿನಿಮಾ ಕೂಡ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ.
ನಾಗಭೂಷಣ್ ಮದುವೆ ಆಗುತ್ತಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರು ಸಾಕಷ್ಟು ಕಲಾವಿದರ ಚಿತ್ರವನ್ನು ಬಿಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.
ಇನ್ನು ನಾಗಭೂಷಣ್ ಅವರ ವಿವಾಹ ಇಂದು ಬೆಳಗಾವಿಯಲ್ಲಿ ನಡೆದ ಬಳಿಕ ಫೆ. ೨ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿದು ಬಂದಿದೆ.