Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮಾಡಲೇಬೇಕಾದ ಅಗತ್ಯ ಇಲ್ಲ’ – ಯದುವೀರ ಕೃಷ್ಣದತ್ತ ಒಡೆಯರ್‌

ಮಂಡ್ಯ: ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಚುನಾವಣೆಯಲ್ಲಿಯೂ ಸ್ಪರ್ಧಿಸಲ್ಲ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ.

ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ ಎಂದರು.

ಇನ್ನು ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮಾಡಲೇಬೇಕಾದ ಅಗತ್ಯ ಇಲ್ಲ. ಬೇರೆ ರೀತಿಯಲ್ಲೂ ಮಾಡಬಹುದು. ಅದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದರು.