Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸರಕಾರ 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ.!

 

ಬೆಂಗಳೂರು: 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟ ಸಭೆ  ಒಪ್ಪಿಗೆ ನೀಡಿದೆ. ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಕೆಳಕಂಡ ದಿನಗಳು ಸಾರ್ವತ್ರಿಕ ರಜಾದಿನಗಳಾಗಿವೆ. ಈ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಅಂಬೇಡ್ಕರ್ ಜಯಂತಿ (ಏ. 14), ಮಹಾವೀರ ಜಯಂತಿ (ಏಪ್ರಿಲ್ 21), ಎರಡನೇ ಶನಿವಾರ ಬರುವ ವಿಜಯದಶಮಿ (ಅ. 12) ನಮೂದಿಸಿಲ್ಲ.

2024ರ ಸಾರ್ವತ್ರಿಕ ರಜಾದಿನಗಳು

ಜ.15;ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ

ಜ.26;ಗಣರಾಜ್ಯೋತ್ಸವ

ಮಾರ್ಚ್ 8; ಮಹಾಶಿವರಾತ್ರಿ

ಮಾರ್ಚ್ 29;ಗುಡ್ ಫ್ರೈಡೇ

ಏ. 9; ಯುಗಾದಿ

ಏ. 11; ರಂಜಾನ್

ಮೇ 1; ಕಾರ್ಮಿಕ ದಿನ

ಮೇ 10; ಬಸವ ಜಯಂತಿ

ಜೂನ್ 17; ಬಕ್ರೀದ್

ಜುಲೈ 17;  ಮೊಹರಂ ಕಡೇ ದಿನ

ಆ.15; ಸ್ವಾತಂತ್ರ್ಯ ದಿನ

ಸೆ.7; ವರಸಿದ್ಧಿ ವಿನಾಯಕ ವ್ರತ

ಸೆ.16; ಈದ್ ಮಿಲಾದ್

ಅ.2 ಗಾಂಧಿ ಜಯಂತಿ

ಅ.11; ಮಹಾನವಮಿ, ಆಯುಧ ಪೂಜೆ

ಅ.17; ವಾಲ್ಮೀಕಿ ಜಯಂತಿ

ಅ.31; ನರಕ ಚತುರ್ದಶಿ

ನ.1; ಕನ್ನಡ ರಾಜ್ಯೋತ್ಸವ

ನ.2; ಬಲಿಪಾಡ್ಯಮಿ, ದೀಪಾವಳಿ

ನ.18; ಕನಕದಾಸ ಜಯಂತಿ

ಡಿ.25; ಕ್ರಿಸ್ಮಸ್