Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸರ್ಕಾರ ನೀಡಿರುವ ಮೊಬೈಲ್‌ ವಾಪಸ್‌; ನಾಳೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಬೆಂಗಳೂರು: ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ವಾಪಸ್‌ ನೀಡೋದಾಗಿ ಅಂಗನವಾಡಿ ಕಾರ್ಯಕರ್ತೆಯರು ಜುಲೈ 10 ರಂದು(ನಾಳೆ) ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸರ್ಕಾರ ನೀಡಿದ 64,000 ಹ್ಯಾಂಡ್‌ಸೆಟ್‌ಗಳನ್ನು ಹಿಂದಿರುಗಿಸುವುದಾಗಿ ಮತ್ತು ನಡೆಯುತ್ತಿರುವ ಸಮೀಕ್ಷೆಗಳಿಗೆ ಡೇಟಾ ಸಂಗ್ರಹಿಸುವುದನ್ನು ನಿಲ್ಲಿಸುವುದಾಗಿ ಕಾರ್ಯಕರ್ತೆಯರು ಬೆದರಿಕೆ ಹಾಕಿದ್ದಾರೆ.

ʻಯಾವುದೇ ಎಲೆಕ್ಟ್ರಾನಿಕ್ಸ್ ಉತ್ಪನ್ನಕ್ಕೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ವಾರಂಟಿ ಇರುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಫೋನ್‌ಗಳು ಈಗಾಗಲೇ ನಾಲ್ಕು ವರ್ಷಗಳಷ್ಟು ಹಳೆಯದಾಗಿದೆ. ಸರ್ಕಾರ ನೀಡಿದ ಫೋನ್‌ಗಳಲ್ಲಿ ಸ್ಟೋರೇಜ್‌ ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲʼ ಎಂದು ಕರ್ನಾಟಕ ಅಂಗನವಾಡಿ ನೌಕರರ ಸಂಘವು ಹೊರಡಿಸಿದ ಪತ್ರಿಕಾ ಹೇಳಿಕೆ ತಿಳಿಸಿದೆ.

ಪ. ಬಂಗಾಳದಲ್ಲಿ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ, 18 ಮಂದಿ ಸಾವು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಅನುರಾಧ ಕೆಎನ್ ಮಾತನಾಡಿ, “ಜಿಲ್ಲಾ ನಿರ್ದೇಶಕರು ನನಗೆ ವರದಿಯನ್ನು ನೀಡಿದ್ದಾರೆ… ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮೊಬೈಲ್ ಫೋನ್‌ಗಳನ್ನು ಹಿಂದಿರುಗಿಸಲು ಯೋಜಿಸುತ್ತಿದ್ದಾರೆ. ಹ್ಯಾಂಡ್‌ಸೆಟ್‌ಗಳು ಹಳೆಯದಾಗಿದ್ದರೆ, ನಾವು ಅವುಗಳನ್ನು ಬದಲಾಯಿಸುತ್ತೇವೆ. ಅಲ್ಲದೆ, ನಾವು ಅವರಿಗೆ ರೀಚಾರ್ಜ್ ಭತ್ಯೆ ನೀಡುತ್ತಿದ್ದೇವೆ” ಎಂದರು.

ಜುಲೈ 10 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯ ಬಗ್ಗೆ ನನಗೆ ತಿಳಿದಿಲ್ಲ. ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಕೇಳಲಾಗಿದೆ ಎಂದು ಅವರು ನಿರಾಕರಿಸಿದರು.