ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಾಡೆಲ್ ಉರ್ಫಿ ಜಾವೇದ್ ಅರೆಸ್ಟ್ ವಿಡಿಯೋ
ಮುಂಬೈ : ಸದಾ ಸಾರ್ವಜನಿಕ ಸ್ಥಳಗಳಲ್ಲಿ ತನ್ನ ವಿಚಿತ್ರ ಡ್ರೆಸ್ ಗಳಿಂದ ಸುದ್ದಿಯಲ್ಲಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಯಾವ ಕಾರಣಕ್ಕಾಗಿ ಉರ್ಫಿ ಜಾವೇದ್ ಬಂಧನವಾಗಿದೆ ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕೃತವಾಗಿ ಮುಂಬೈ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ.
ತುಂಡುಡುಗೆಗಳನ್ನು ಧರಿಸಿ ಸಾರ್ವಜನಿಕವಾಗಿ ಓಡಾಡಿದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. viralbhayani ಎನ್ನುವ ಇನ್ಸ್ಟಾಗ್ರಾಮ್ ಖಾತೆ ಉರ್ಫಿ ಅವರನ್ನು ಪೊಲೀಸರು ಕರೆದೊಯ್ದ ವಿಡಿಯೊವೊಂದನ್ನು ಕೂಡ ಹಂಚಿಕೊಂಡಿದೆ.
ಪೊಲೀಸರು ಕರೆದೊಯ್ಯುವ ವೇಳೆ ‘ಯಾಕೆ ನನ್ನನ್ನು ಕರೆದೊಯ್ಯುತ್ತಿದ್ದೀರಿ’ ಎಂದು ಉರ್ಫಿ ಕೂಗಿದ್ದಾರೆ, ಅದಕ್ಕೆ ಪೊಲೀಸರು ‘ಇಷ್ಟು ಸಣ್ಣ ಬಟ್ಟೆಯನ್ನು ಯಾರು ಧರಿಸುತ್ತಾರೆ’ ಎಂದು ಜೀಪ್ ಹತ್ತಿಸಿಕೊಂಡಿದ್ದಾರೆ.ಇತ್ತೀಚೆಗೆ ಉರ್ಫಿ ಅವರು ಕಿವಿಗೆ ಅಗರಬತ್ತಿಯನ್ನು ಸಿಕ್ಕಿಸಿಕೊಂಡು ಕೆಂಪು ಉಡುಗೆ ತೊಟ್ಟು ವಿಚಿತ್ರವಾಗಿ ಕಾಣುವಂತೆ ವಿಡಿಯೊ ಮಾಡಿ ಹಂಚಿಕೊಂಡಿದ್ದರು. ಆ ಬಳಿಕ ಉರ್ಫಿಗೆ ಕೊಲೆ ಬೆದರಿಕೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಇದೀಗ ರೆಸ್ಟೋರೆಂಟ್ವೊಂದರಿಂದ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಉರ್ಫಿ ಅವರನ್ನು ಜೀಪ್ಗೆ ಹತ್ತಿಸಿಕೊಂಡು ಹೋದ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.