ಸಾಯಿ ಪಲ್ಲವಿ ಸಹೋದರಿಯ ಅದ್ಧೂರಿ ನಿಶ್ಚಿತಾರ್ಥ
ಕೇರಳ: ಸ್ಟಾರ್ ನಟಿ ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಕಣ್ಣನ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ.
ಈ ಸಮಾರಂಭದಲ್ಲಿ ಕುಟುಂಬದೊಂದಿಗೆ ಸಾಯಿ ಪಲ್ಲವಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಪೂಜಾ, ಹಲವಾರು ವರ್ಷಗಳಿಂದ ವಿನೀತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಇದೀಗ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.