ಸಾರಾ ತೆಂಡೂಲ್ಕರ್ ಜೊತೆ ಕಾಣಿಸಿಕೊಂಡ ಶುಭಮನ್ ಸೋದರಿ – ಸೀಕ್ರೆಟ್ ಡೇಟಿಂಗ್ ಬಹಿರಂಗ
ನವದೆಹಲಿ: ಭಾರತದ ಯುವ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿತ್ತು. ಇದರ ಬೆನ್ನಲೇ ಇದೀಗ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಸೋದರಿ ಶಹ್ನೀಲ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ತಮ್ಮ ಸೀಕ್ರೆಟ್ ಡೇಟಿಂಗ್ ಸುದ್ದಿ ನಿಜ ಎನ್ನುವಂತೆ ಮಾಡಿದೆ.
ತಮ್ಮ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಪ್ರೇಮಿಗಳ ಹೃದಯ ಕದ್ದಿರುವ ಶುಭಮನ್ ಗಿಲ್ ಪ್ರಸ್ತುತ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ ತಂಡದ ನಾಯಕನಾಗಿದ್ದು, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿಗಳು ಆಗಾಗ ಹರಿದಾಡುತ್ತಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಸೋದರಿ ಶಹ್ನೀಲ್ ಜೊತೆ ಓಡಾಡುತ್ತಿರುವ ವೀಡಿಯೋವೊಂದು ಪಪಾರಾಜಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋದಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಸಾರಾ ತೆಂಡೂಲ್ಕರ್ ಹಾಗೂ ಶುಭಂ ಸೋದರಿ ಶಹ್ನೀಲ್ ಗಿಲ್ ಕುಳಿತಿರುವುದನ್ನು ಕಾಣಬಹುದು.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವೀಡಿಯೋ ನೋಡಿದ ಜನ ಸಾರಾ ಹಾಗೂ ಶುಭಮನ್ ಗಿಲ್ ಪ್ರೇಮ ಸಂಬಂಧ ಖಚಿತವಾಗಿದೆ. ಇದೇ ಕಾರಣಕ್ಕೆ ಶುಭಮನ್ ಗಿಲ್ ಸೋದರಿ ಜೊತೆ ಸಾರಾ ಓಡಾಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಶುಭಮನ್ ಗಿಲ್ಗೆ ಕಂಗ್ರಾಟ್ಸ್ ಹೇಳಿದ್ದಾರೆ.