ಸಿಂಧನೂರು: ಒಂದೇ ಶಿರ, 2 ದೇಹ, 8 ಕಾಲುಗಳ ಕರು ಜನನ -ಆಶ್ಚರ್ಯಕರವಾಗಿ ನೋಡಿದ ಜನ
ಸಿಂಧನೂರು: ಪ್ರಕೃತಿಯಲ್ಲಿ ಒಂದಲ್ಲಾ ಒಂದು ವಿಸ್ಮಯ ನಡೆಯುತ್ತಲೇ ಇರುತ್ತವೆ ಅವುಗಳಲ್ಲಿ ನಂಬಲು ಅಸಾಧ್ಯವಾದವುಗಳು ಇವೆ. ಕೆಲವೊಮ್ಮೆ ನಂಬಲೇಬೇಕಾಗತ್ತದೆ. ಸಾಮಾನ್ಯವಾಗಿ ಹಸುವಿನ ಕರುವಿಗೆ ದೇಹದಲ್ಲಿ ನಾಲ್ಕು ಕಾಲು, ಒಂದು ಬಾಲ ಇದ್ದು ಮುದ್ದಾಗಿ ಕಾಣುವುದನ್ನು ನಾವು ನೋಡಿದ್ದೇವೆ. ಆದರೆ ವಿಚಿತ್ರವೆಂಬಂತೆ ಒಂದು ಶಿರಕ್ಕೆ ಎರಡು ದೇಹ ಎಂಟು ಕಾಲುಗಳುಳ್ಳ ಮರಿಯೊಂದು ಜನಸಿ ಅಚ್ಚರಿ ಮೂಡಿಸಿದೆ. ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದಲ್ಲಿ ಈ ವಿಸ್ಮಯ ನಡೆದಿದ್ದು, ಗ್ರಾಮದ ಗ್ಯಾನಪ್ಪ ಎಂಬುವರಿಗೆ ಸೇರಿದೆ ಕರುವಿನ ಚಲನ ವಲನದ ಬಗ್ಗೆ ತಿಳಿಸಿ ಆರೋಗ್ಯವಾಗಿದೆ ಎಂದು ಹೇಳುತ್ತಿದ್ದಾರೆ. ಗ್ರಾಮಸ್ಥರೆಲ್ಲರು ಕರವನ್ನು ನೋಡಲು ಮುಗಿಬಿದ್ದಿದ್ದು, ಆಶ್ಚರ್ಯಕರ ರೀತಿಯಲ್ಲಿ ನೋಡುತ್ತಿದ್ದಾರೆ. ಹಾಗೇ ಇದೊಂದು ದೇವರ ಸೃಷ್ಟಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.