ಸಿಎಂ ವಿರುದ್ದ ಬಿಜೆಪಿ ‘ಜಾತ್ಯಾತೀತ’ ಟ್ವೀಟ್ ಕಿಡಿ
ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ‘ಜಾತ್ಯಾತೀತ’ ನಡೆಯ ಬಗ್ಗೆ ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ.
‘ಜಾತ್ಯಾತೀತ’ ಮುಖ್ಯಮಂತ್ರಿಗಳ ನಡೆಯ ಬಗ್ಗೆ ಅವರದೇ ಪಕ್ಷದ ನಾಯಕರುಗಳು ಹೇಳಿರುವುದು ಇದು! ಎಂದು ‘ಕಾಂಗ್ರೆಸ್ ನಲ್ಲಿ ಲಿಂಗಾಯತರಿಗೆ ಮೂಲೆಗುಂಪು’ ಎಂದು ಶಾಮನೂರು ಶಿವಶಂಕರಪ್ಪ, ‘ಒಬಿಸಿಗಳಿಗೆ ಕಾಂಗ್ರೆಸ್ ನಲ್ಲಿ ಬೆಲೆಯಿಲ್ಲ’ ಎಂಬ ಹರಿಪ್ರಸಾದ್ ಹೇಳಿಕೆ ಮತ್ತು ‘ದಲಿತರಿಗೆ ಕಾಂಗ್ರೆಸ್ ನಲ್ಲಿ ಉಳಿಗಾಲವಿಲ್ಲ’ ಎಂಬ ಸಚಿವ ಪರಮೇಶ್ವರ್ ಹೇಳಿಕೆಗಳನ್ನು ಮುಂದಿಟ್ಟು ಬಿಜೆಪಿ, ಕಾಂಗ್ರೆಸ್ ಸರ್ಕಾರಕ್ಕೆ ಟೀಕಿಸಿದೆ.
‘ಜಾತ್ಯಾತೀತ’ ನಡೆ ಬಗ್ಗೆ ಅವರದೇ ಪಕ್ಷದ ನಾಯಕರು ಒಪ್ಪುತ್ತಿಲ್ಲ ಎಂದು ಆರೋಪಿಸಿದೆ.