‘ಸಿಎಂ ಸ್ಥಾನ ಬಯಸಿದ್ದ ಡಿಕೆಶಿ ಬಗ್ಗೆ ನನಗೆ ಪಾಪಾ ಅನಿಸುತ್ತೆ’ – ಪ್ರತಾಪ್ ಸಿಂಹ
ಮೈಸೂರು:ಶಿವಕುಮಾರ್ ಬಗ್ಗೆ ನನಗೆ ಪಾಪಾ ಅನ್ನಿಸುತ್ತದೆ.ಚುನಾವಣೆಗೆ ಮುನ್ನ ಒಕ್ಕಲಿಗರಿಗೆ ಹೇಳುತ್ತಿದ್ದರು . ಡಿ.ಕೆ. ಶಿವಕುಮಾರ್ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಗೂ ಬಂಡವಾಳ ಹಾಕಿದ್ದರು. ಅಧಿಕಾರ ಬಂದ ಮೇಲೆ ಸಿದ್ದರಾಮಯ್ಯ ಹಠ ಹಿಡಿದು ಮೊದಲ ಅವಧಿಗೆ ಸಿಎಂ ಆದರು. ಸಿಎಂ ಕುರ್ಚಿಯಲ್ಲಿ ಕೂತ ಕೂಡಲೇ ಪೂ ರ್ಣಾವಧಿ ಸಿಎಂ ಆಗುವ ಪ್ಲಾನ್ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತಾನಾಡಿದ ಅವರು,ತಮ್ಮ ತಂದೆಯೇ ಐದು ವರ್ಷ ಸಿಎಂ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಎಂ.ಬಿ. ಪಾಟೀಲ್, ಸತೀಶ್ ಜಾರಕಿ ಹೊಳಿ, ರಾಜಣ್ಣ ಮೂಲಕ ಮೊದಲ ಸಿಎಂ ಹೇಳಿಕೆ ಕೊಡಿಸಿದ್ದರು. ಈಗ ಮಗನ ಕೈಯಲ್ಲಿ ಪೂರ್ಣಾವಧಿ ಸಿಎಂ ಅಂತಾ ಹೇಳಿಕೆ ಕೊಡಿಸಿದ್ದಾರೆ. ಮಗನ ಮೂಲಕ ಡಿಕೆ ಶಿವಕುಮಾರ್ ಗೆ ಸಂದೇಶ ರವಾನಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ರಾಮನಿಗೆ ಮನ್ನಣೆ ಇಲ್ಲ ಎಂಬುದು ಸದಾ ಕಾಲದ ಸತ್ಯ. ರಾಜ್ಯದಲ್ಲಿ ರಾಮ ಭಕ್ತರ ಆಶಯಕ್ಕೆ ಪೂರಕವಾದ ಸರಕಾರ ಇಲ್ಲ ಎಂಬುದು ಜನರಿಗೆ ಅರ್ಥವಾಗುತ್ತಿದೆ ಎಂದರು.
ಡಿಕೆಶಿಯ ಎದೆಗೆ ಸಿದ್ದರಾಮಯ್ಯ ಮಗನ ಹೆಗಲ ಮೇಲೆ ಗನ್ ಇಟ್ಟು ಹೊಡೆದಿದ್ದಾರೆ ಎಂದು ಲೇವಡಿ ಮಾಡಿದರು.ಡಿಕೆ ಶಿವಕುಮಾರ್ ಅವರೇ ನಿಮ್ಮ ವಿರೋಧಿಗಳು ಬೇರೆ ಎಲ್ಲೂ ಇಲ್ಲ. ನಿಮ್ಮ ಪಕ್ಷದಲ್ಲೆ ಇದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮವಿರೋಧಿ. ಸಿದ್ದರಾಮಯ್ಯ ಎಲ್ಲರ ನಡುವೆ ಜಗಳ ಇಟ್ಟು ತಾವು ಅಧಿಕಾರದಲ್ಲಿ ಮುಂದುವರಿಯವ ಪ್ರಯತ್ನ ಮಾಡುತ್ತಾರೆ. ಸ್ವಜಾತಿ, ಮುಸ್ಲಿಂಮರ ಮೇಲೆ ಮಾತ್ರ ಸಿದ್ದರಾಮಯ್ಯ ಅವರಿಗೆ ಪ್ರೀತಿ ಎಂದು ಕಿಡಿಕಾರಿದರು.