Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಕ್ಕಿಂನಲ್ಲಿ ಮೇಘಸ್ಫೋಟ : ಕೊಚ್ಚಿ ಹೋಗಿದ್ದ 23 ಯೋಧರಲ್ಲಿ 6 ಮಂದಿಯ ಮೃತದೇಹ ಪತ್ತೆ 104 ಮಂದಿಯ ಸುಳಿವಿಲ್ಲ

ಸಿಕ್ಕಿಂ : ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲಿನ ಮೇಘಸ್ಫೋಟದ ಪರಿಣಾಮ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ ಅನಾಹುತಗಳು ಸಾವಿನ ಸಂಖ್ಯೆಯನ್ನ ಹೆಚ್ಚಿಸುತ್ತಿದೆ. ಪ್ರವಾಹದ ಪ್ರತಾಪಕ್ಕೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಮಳೆ ಮತ್ತು ಪ್ರವಾಹದ ಆರ್ಭಟಕ್ಕೆ ಸಾವಿನ ಸಂಖ್ಯೆ 18 ಕ್ಕೆ ಏರಿಕೆಯಾಗಿದ್ದು, 104 ಮಂದಿ ನಾಪತ್ತೆಯಾಗಿದ್ದಾರೆ. ಇನ್ನು ಮೃತರ 6 ಮಂದಿ ಸೇನಾ ಯೋಧರಾಗಿದ್ದಾರೆ. ಇನ್ನು ಓರ್ವ ಸೇನಾಧಿಕಾರಿಯನ್ನು ರಕ್ಷಣೆ ಮಾಡಲಾಗಿದೆ. ಮಂಗಾನ್​ ಜಿಲ್ಲೆಯ ಡಿಕ್ಚುನಲ್ಲಿ ಮಳೆ ಅಬ್ಬರಕ್ಕೆ 16 ಮನೆಗಳಿಗೆ ಹಾನಿಯಾಗಿದ್ದು, 100 ಜನ ಸಂತ್ರಸ್ತರಿಗೆ ರಿಲೀಫ್​ ಕ್ಯಾಂಪ್​ನಲ್ಲಿ ಆಶ್ರಯ ನೀಡಲಾಗಿದೆ. ನಾಪತ್ತೆಯಾಗಿದ್ದ ಯೋದರು ಇನ್ನೂ ಪತ್ತೆಯಾಗಿಲ್ಲ, ಶೋಧಕಾರ್ಯ ಮುಂದುವರೆದಿದೆ. ಮೇಘಸ್ಫೋಟ ಮತ್ತು ಪ್ರವಾಹ ಹೊಡೆತದಿಂದ ಸಿಕ್ಕಿಂನ ಹಲವೆಡೆ ಜನರು ಅಕ್ಷರಶಃ ಬೀದಿಗೆ ಬೀದಿದ್ದಾರೆ. ಮಳೆ ಹೀಗೆ ಮುಂದುವರಿದ್ರೆ ಸಿಕ್ಕಿಂ ಸ್ಥಿತಿ ನಿಜಕ್ಕೂ ಶೋಚನೀಯ ಆಗೋದಂತೂ ಪಕ್ಕಾ.