Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಡಿಲು ಬಡಿದು ಕೋಮಾ ಸ್ಥಿತಿಯಲ್ಲಿದ್ದ ಭಾರತ ಮೂಲದ ವಿದ್ಯಾರ್ಥಿನಿ ಚೇತರಿಕೆ

ಅಮೆರಿಕ: ಸಿಡಿಲು ಬಡಿದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಭಾರತ ಮೂಲದ ವಿದ್ಯಾರ್ಥಿನಿ ಈಗ ಚೇತರಿಕೆ ಕಂಡಿದ್ದಾರೆ. ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಸುಸ್ರೂಣ್ಯ ಕೋಡೂರು ಜುಲೈ 2 ರಂದು ಸ್ಯಾನ್ ಜೆಸಿಂಟೋ ಸ್ಮಾರಕ ಉದ್ಯಾನದ ಬಳಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಿಡಿಲು ಬಡಿದಿದೆ.

ಬಳಿಕ ತ್ರೀವ ನಿಗಾ ಘಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಈಗ ವೆಂಟಿಲೇಟರ್ ಇಲ್ಲದೆಯೇ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಪೋಷಕರನ್ನು ಹೈದರಾಬಾದ್‌ನಿಂದ ಹೂಸ್ಟನ್‌ಗೆ ಕರೆತರಲು ಪ್ರಯತ್ನಿಸುತ್ತಿರುವ ಕೋಡೂರಿನ ಕುಟುಂಬದ ಸದಸ್ಯರು, ಪೋಷಕರ ವೀಸಾಗಳಿಗೆ ಅನುಮತಿ ದೊರೆತಿದೆ.
ಸಿಡಿಲು ಬಡಿದ ಹೊಡೆತಕ್ಕೆ ಆಕೆ ಕೆರೆಗೆ ಬಿದ್ದ ಹಿನ್ನಲ್ಲೆ ಕೋಮಾ ಸ್ಥಿತಿಯಲ್ಲಿದ್ದಳು. ಚಿಕಿತ್ಸೆಗೆ ಸಹಾಯ ಮಾಡಲು ಮತ್ತು ಆಕೆಯ ಪೋಷಕರೊಂದಿಗೆ ಅವಳನ್ನು ಸೇರಿಸಲು ಕುಟುಂಬವು ’GoFundMe’ ಅನ್ನು ರಚಿಸಿದೆ.’ ಈ ಮೂಲಕ ಕುಟುಂಬವು ಎಲ್ಲರ ಸಹಾಯಕ್ಕಾಗಿ ಮನವಿ ಮಾಡಿದೆ ಇದರಿಂದ ಅವರು ಶೀಘ್ರದಲ್ಲೇ ಮೊದಲಿನಂತಾಗುತ್ತಾಳೆ ಎಂದು ಹೇಳಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕೆ ಅಮೆರಿಕಕ್ಕೆ ಹೋಗಿದ್ದಳು, ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಳು. ಇಂಟರ್ನ್‌ಶಿಪ್‌ಗಾಗಿ ಎದುರು ನೋಡುತ್ತಿದ್ದಳು.