Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಧು ಮೂಸೆವಾಲಾ ಹತ್ಯೆ ಪ್ರಕರಣ – ಶಸ್ತ್ರಾಸ್ತ್ರ ಪೂರೈಸಿದ್ದ ವ್ಯಾಪಾರಿಯ ಬಂಧನ

ನವದೆಹಲಿ: ಪಂಜಾಬ್‌ನ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌‌ಸ್ಟರ್‌‌ಗೆ ಶಸ್ತ್ರಾಸ್ತ್ರ ಪೂರೈಸಿದ್ದ ವ್ಯಾಪಾರಿಯನ್ನು ಬಂಧಿಸಲಾಗಿದೆ.

ಧರ್ಮಂಜೋತ್ ಸಿಂಗ್ ಕಹ್ಲೋನ್ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಈತ ಗ್ಯಾಂಗ್​ಸ್ಟರ್ ​​ಲಾರೆನ್ಸ್ ಬಿಷ್ಣೋಯ್ ಅವರಿಗೆ ತುಂಬಾ ನಿಕಟವಾಗಿದ್ದ ಎಂದು ಹೇಳಲಾಗಿದ್ದು, ಆತನ ಸೂಚನೆಯ ಮೇರೆಗೆ ಮೂಸೇವಾಲ ಅವರನ್ನು ಹತ್ಯೆ ಮಾಡಲಾಗಿತ್ತು.

ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಕಹ್ಲೋನ್, ಸಿಧು ಮುಸೆವಾಲಾ ಅವರನ್ನು ಕೊಂದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಎನ್ನಲಾಗಿದೆ.