Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಮೆಂಟ್ ಲಾರಿ ಟೈಯರ್ ಬ್ಲಾಸ್ಟ್ – ಎರಡು ಪೀಸ್ ಆಗಿ ರಸ್ತೆ ಬದಿಗೆ ಬಿದ್ದ ಲಾರಿ

ಚನ್ನಪಟ್ಟಣ ಸೆಪ್ಟೆಂಬರ್ 15: ಲಾರಿಯೊಂದರ ಟಯರ್ ಸ್ಪೋಟಗೊಂಡು ಪಲ್ಟಿಯಾದ ಘಟನೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರಿನಿಂದ ಮೈಸೂರಿಗೆ ವೇಗವಾಗಿ ತೆರಳುತ್ತಿದ್ದ ಸಿಮೆಂಟ್ ತುಂಬಿದ್ದ ಲಾರಿಯ ಟಯರ್ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಲಾರಿಯು ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಮತ್ತೊಂದು ಬದಿಗೆ ಉರುಳಿಕೊಂಡು ಬಂದು ಪಲ್ಟಿಯಾಗಿದೆ. ವಾಹನ ಎರಡು ತುಂಡಾಗಿದ್ದು, ಅರ್ಧ ಭಾಗ ಸರ್ವಿಸ್ ರಸ್ತೆಯಲ್ಲಿ ಮತ್ತೊಂದು ಭಾಗ ಈ ಜಾಗದ ಅಂಡರ್ ಪಾಸ್ ನಲ್ಲಿ ಬಿದ್ದಿದೆ. ಘಟನೆಯಲ್ಲಿ ಲಾರಿಯಡಿ‌ ಸಿಲುಕಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಚಾಲಕ ಸುಬ್ಬಯ್ಯ ನಾಯ್ಡು ನನ್ನು ಸ್ಥಳೀಯರ ನೆರವಿನಿಂದ‌ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಚಾಲಕ ಸುಬ್ಬಯ್ಯ ನಾಯ್ಡು ಅವರನ್ನು ಹೊರತೆಗೆಯಲು ಒಂದು ಗಂಟೆ ಪೊಲೀಸರು ಹಾಗೂ ಸಾರ್ವಜನಿಕರು ಹರಸಾಹಸ ನಡೆಸಿದರು. ಚಾಲಕನ ಕಾಲಿಗೆ ತೀವ್ರ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.