ಸೀಮಾ ಹೈದರ್ ಬಳಿ 4 ಮೊಬೈಲ್ ಫೋನ್, 5 ಪಾಕ್ ಅಧಿಕೃತ ಪಾಸ್ಪೋರ್ಟ್ ಪತ್ತೆ.!
![](https://suddimane.com/wp-content/uploads/2023/07/WhatsApp-Image-2023-07-20-at-9.03.49-AM.jpeg)
ಲಕ್ನೋ: ಪಬ್ ಜೀ ಗೆಳೆಯನಿಗಾಗಿ ಪಾಕಿಸ್ತಾನದಿಂದ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ಸೀಮಾ ಹೈದರ್ ಬಳಿ ನಾಲ್ಕು ಮೊಬೈಲ್ ಫೋನ್ಗಳು, ಎರಡು ವಿಡಿಯೋ ಕ್ಯಾಸೆಟ್ಗಳು, ಐದು ಪಾಕಿಸ್ತಾನದ ಅಧಿಕೃತ ಪಾಸ್ಪೋರ್ಟ್ಗಳು ಮತ್ತು ಅಪೂರ್ಣ ಹೆಸರು ಮತ್ತು ವಿಳಾಸದ ಬಳಕೆಯಾಗದ ಪಾಸ್ಪೋರ್ಟ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ಉತ್ತರ ಪ್ರದೇಶದ ಡಿಜಿಪಿ ಕಚೇರಿ ತಿಳಿಸಿದೆ. ಸೀಮಾ ಹೈದರ್ ಬಳಿ ಒಂದು ಗುರುತಿನ ಚೀಟಿ ಕೂಡ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಡಿಜಿಪಿ ಕಚೇರಿ ತಿಳಿಸಿದೆ.