Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೀಮೆ ದಾಟಿ ಬಂದ ಸೀಮಾ ಸಂಸದೆ ಆಗ್ತಾರಂತೆ!

ನವದೆಹಲಿ: ಪಬ್‌ಜಿ ಆಟದಲ್ಲಿ ಪರಿಚಯ ಅಲ್ಲಿಂದಲೇ ಪ್ರೇಮಾಂಕುರವಾಗಿ ಪ್ರಿಯತಮನನ್ನು ಹುಡುಕಿಕೊಂಡು ಸೀಮಾ ಎಂಬ ಪಾಕಿಸ್ತಾನದ ಮಹಿಳೆ ಭಾರತಕ್ಕೆ ಬಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಈಗ ಹೊಸ ವಿಷಯ ಏನಂದ್ರೆ, ಸಚಿನ್ ಮೀನಾ ಎಂಬ ತನ್ನ ಗೆಳೆಯನನ್ನು ಹುಡುಕಿಕೊಂಡು ಸೀಮೆ ದಾಟಿ ಬಂದ ಸೀಮಾ ಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಾಳಂತೆ! ಇದಕ್ಕೆ ಅವಕಾಶ ಕೊಡಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ತುದಿಗಾಲ ಮೇಲೆ ನಿಂತಿದೆ. ರಾಮದಾಸ್ ಅಠವಳೆ ಅವರ ನೇತೃತ್ವದ ಪಕ್ಷ ಇದಾಗಿದೆ. ಸೀಮಾ ಅವರು ಬರುವ ಲೋಕಸಭಾ ಚುನಾವಣೆ ವೇಳೆ ಭಾರತದ ಪೌರತ್ವ ಪಡೆದಿದ್ದೇ ಆದಲ್ಲಿ ಅವರು ದೇಶದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಆರ್‌ಪಿಐ ನಾಯಕ ಕಿಶೋರ್ ಹೇಳಿದ್ದಾರೆ. ಇನ್ನು ಈ ವಿಷಯವನ್ನು ಆರ್‌ಪಿಐ ನಾಯಕರು, ಸೀಮಾ ಹೈದರ್ ಅವರೊಂದಿಗೆ ಚರ್ಚಿಸಿದ್ದಾರೆ. ಮೊದಲು ಇದಕ್ಕೆ ನಿರಾಕರಿಸಿದ್ದ ಸೀಮಾ ನಂತರ ಒಪ್ಪಿದ್ದಾರೆ ಎನ್ನಲಾಗಿದೆ.