‘ಸುಮ್ಮನೆ ಗಾಳಿಯಲ್ಲಿ ಗುಂಡು ಹಾಕುವುದು ಬೇಡ- ಪ್ರಿಯಾಂಕ್ ಖರ್ಗೆ ತಿರುಗೇಟು
ಬೆಂಗಳೂರು: ಐಟಿ ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಿ ಕೊಡುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಉದ್ಯಮಿ ಟಿವಿ ಮೋಹನ್ ದಾಸ್ ಪೈ ಮಾಡಿರುವ ಟ್ವೀಟ್ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಮೋಹನ್ ದಾಸ್ ಪೈ ಗೆ ಮಾಹಿತಿ ಕೊರತೆ ಇದೆ. ಒಂದೇ ಒಂದು ಸಿಂಗಲ್ ಕಂಪನಿ ಕರ್ನಾಟಕ ಬಿಟ್ಟು ಹೋಗಿಲ್ಲ. ಕರ್ನಾಟಕ ವಿರೋಧಿ ಹೇಳಿಕೆ ಕೊಡೋದು ಕೆಲವರಿಗೆ ಹ್ಯಾಬಿಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಮೋಹನ್ ದಾಸ್ ಪೈ ಬೇರೆ ಬೇರೆ ರಾಜ್ಯಗಳ ಕಂಪನಿಗೆ ಬಂಡವಾಳ ಹಾಕುವುದಿಲ್ವಾ. ಅವರು ಡೈವರ್ಸಿಫಿಕೇಷನ್ ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ? ಕನ್ನಡಿಗರ ಪರವಾಗಿ ಮಾತನಾಡುವುದು ಬಿಟ್ಟು ಈ ರೀತಿ ಮಾತನಾಡಬಾರದು ಅವರು ಒಂದೇ ಒಂದು ಕಂಪನಿಯ ಉದಾಹರಣೆ ನೀಡಲಿ ನೋಡೋಣ ಎಂದು ಸವಾಲು ಹಾಕಿದರು.
ಸುಮ್ಮನೆ ಗಾಳಿಯಲ್ಲಿ ಗುಂಡು ಹಾಕುವುದು ಬೇಡ. ಇವರೇ ಅಲ್ವಾ ಎಲ್ಲ ವಿಷನ್ ಗ್ರೂಪ್ ನಲ್ಲಿ ಇದ್ದವರು? ಫಿಲಿಪ್ಸ್ ಇನೊವೇಶನ್ ರಾಜ್ಯಕ್ಕೆ ಬಂದಾಗ ಇವರು ಬೆನ್ನು ತಟ್ಟಿದ್ರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.